ಬಂಗಾಳಿ ಭಾಷೆಯಲ್ಲೂ ಮತಪತ್ರ
ನ್ಯೂಯಾರ್ಕ್‌ನಲ್ಲಿ ನಡೆಯುವ ಮತದಾನದಲ್ಲಿ ಬಳಸಲಾಗುತ್ತಿರುವ ಮತಪತ್ರಗಳಲ್ಲಿ ಬಂಗಾಳಿ ಭಾಷೆಯಲ್ಲೂ ವಿವರಗಳನ್ನು ಮುದ್ರಿಸಲಾಗುತ್ತದೆ. ಇಂಗ್ಲಿಷ್, ಬಂಗಾಳಿ ಮಾತ್ರವಲ್ಲದೆ ಚೀನಿ, ಸ್ಪ್ಯಾನಿಶ್ ಮತ್ತು ಕೊರಿಯಾ ಭಾಷೆಗಳಲ್ಲೂ ಮತಪತ್ರಗಳನ್ನು ಮುದ್ರಿಸಲಾಗುತ್ತದೆ. ಅದು ಕಾನೂನು ಪ್ರಕಾರ ತೆಗೆದುಕೊಳ್ಳುತ್ತಿರುವ ಅನಿವಾರ್ಯ ಕ್ರಮವಾಗಿದೆ. ಕಾನೂನಿನ ಪ್ರಕಾರ, ನ್ಯೂಯಾರ್ಕ್ ಸಿಟಿಯ ಕೆಲವು ಕಡೆಗಳಲ್ಲಿ ಬಂಗಾಳಿ ಭಾಷೆಯಲ್ಲಿ ಮತಪತ್ರಗಳನ್ನು ಮುದ್ರಿಸುವುದು ಕಡ್ಡಾಯ. ಮತಪತ್ರ ಮಾತ್ರವಲ್ಲ, ಬಂಗಾಳಿ ಮಾತನಾಡುವ ಮತದಾರರಿಗೆ ಅನುಕೂಲ ಕಲ್ಪಿಸುವುದಕ್ಕಾಗಿ ಇತರೆ ಚುನಾವಣಾ ಪರಿಕರಗಳಲ್ಲೂ ಬಂಗಾಳಿಯಲ್ಲಿ ವಿವರ ಇರಬೇಕಾಗಿದೆ. ಭಾರತದಲ್ಲಿ ಬಳಕೆಯಲ್ಲಿರುವ ಭಾಷೆಯನ್ನು ಚುನಾವಣಾ ಪ್ರಕ್ರಿಯೆಯಲ್ಲಿ ಬಳಸುವ ಬಗ್ಗೆ ಈ ಹಿಂದೆ ಕಾನೂನು ಹೋರಾಟ ನಡೆದಿತ್ತು. ಅಂತಿಮವಾಗಿ ಬಂಗಾಳಿ ಭಾಷೆಯನ್ನು ಆಯ್ಕೆ ಮಾಡಲಾಗಿತ್ತು. 2013ರಿಂದ ಮತಪತ್ರದಲ್ಲಿ ಬಂಗಾಳಿಯನ್ನೂ ಬಳಸಲಾಗುತ್ತಿದೆ.