ಕ್ಯಾನ್‌ಬೆರಾ: ಆಸ್ಟ್ರೇಲಿಯಾ ರಾಜಧಾನಿ ಕ್ಯಾನ್‌ಬೆರಾದಲ್ಲಿ ಹೊಸದಾಗಿ 22 ಕೋವಿಡ್ ಪ್ರಕರಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ಅಲ್ಲಿನ ಸರ್ಕಾರ ಅಕ್ಟೋಬರ್ 15 ರವರೆಗೆ ಲಾಕ್‌ಡೌನ್ ವಿಸ್ತರಿಸಿದೆ.

ಈ ಹಿಂದೆ ಸಿಡ್ನಿಯಲ್ಲಿ ಕೊರೊನಾದ ‘ಡೆಲ್ಟಾ‘ ರೂಪಾಂತರ ಸೋಂಕಿನ ಒಂದು ಪ್ರಕರಣ ಪತ್ತೆಯದಾಗ ಆಗಸ್ಟ್ 12 ರಿಂದ ಲಾಕ್‌ಡೌನ್ ಘೋಷಿಸಲಾಗಿತ್ತು. ನಂತರ ಅದನ್ನು ಮುಂದುವರಿಸಲಾಗಿತ್ತು. ಈಗ ಪುನಃ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರಾದೇಶಿಕ ಮುಖ್ಯಮಂತ್ರಿ ಆಂಡ್ರೀವ್ ಬಾರ್, ಅಕ್ಟೋಬರ್ 15 ರವರೆಗೆ ಲಾಕ್‌ಡೌನ್ ವಿಸ್ತರಿಸಿರುವುದಾಗಿ ಮಂಗಳವಾರ ಪ್ರಕಟಿಸಿದ್ದಾರೆ.

ಕ್ಯಾನಬೆರಾವನ್ನು ನ್ಯೂ ಸೌತ್ ವೇಲ್ಸ್ ರಾಜ್ಯ ಸುತ್ತುವರಿದಿದೆ. ಈ ರಾಜ್ಯದ ಲಿಮೌಸಿನ್ ನಗರದಲ್ಲಿ ಜೂ. 16ರಂದು ಟ್ಯಾಕ್ಸಿ ಚಾಲಕನೊಬ್ಬನಲ್ಲಿ ಕೋವಿಡ್–ಡೆಲ್ಟಾ ರೂಪಾಂತರ ಸೋಂಕು ಪತ್ತೆಯಾಗಿತ್ತು. ಇದಾದ ನಂತರ ಜೂ. 26 ರಿಂದ ಸಿಡ್ನಿ ನಗರವನ್ನು ಲಾಕ್‌ಡೌನ್ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.