ಇಸ್ಲಾಮಾಬಾದ್: 2008ರಲ್ಲಿ ಮುಂಬೈ ಮೇಲೆ ನಡೆದ ದಾಳಿಯ ಸಂಚುಕೋರ ಹಾಗೂ ಲಷ್ಕರ್–ಎ–ತಯಬಾ (ಎಲ್ಇಟಿ) ಕಮಾಂಡರ್ ಅಜಂ ಛೀಮಾ ಪಾಕಿಸ್ತಾನದ ಫೈಸಲಾಬಾದ್ನಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾನೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ.

ಅಜಂ ಅಂತ್ಯಕ್ರಿಯೆಯನ್ನು ಫೈಸಲಾಬಾದ್ನ ಮಲ್ಖಾನ್ವಾಲಾದಲ್ಲಿ ನಡೆಸಲಾಗಿದೆ ಎಂದು ವರದಿಯಾಗಿದೆ.

2008ರ ನವೆಂಬರ್ 26ರಂದು ಸಮುದ್ರ ಮಾರ್ಗವಾಗಿ ದಕ್ಷಿಣ ಮುಂಬೈಗೆ ಲಗ್ಗೆ ಇಟ್ಟಿದ್ದ ಪಾಕಿಸ್ತಾನದ 10 ಉಗ್ರರು, ತಾಜ್ ಹೋಟೆಲ್ ಸೇರಿದಂತೆ ಹಲವು ಸ್ಥಳಗಳಲ್ಲಿ ದಾಳಿ ನಡೆಸಿದ್ದರು. ಈ ವೇಳೆ 166 ನಾಗರಿಕರು ಮೃತಪಟ್ಟು, 18 ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದರು.

ಅಜಂ, 2006ರಲ್ಲಿ ಮುಂಬೈನಲ್ಲಿ ನಡೆದ ರೈಲು ಸ್ಫೋಟದ ರೂವಾರಿಯೂ ಹೌದು. ಈ ದಾಳಿಯಲ್ಲಿ 188 ಮಂದಿ ಮೃತಪಟ್ಟು, 800ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
.26/11ರ ಮುಂಬೈ ಭಯೋತ್ಪಾದಕ ದಾಳಿಗೆ 15 ವರ್ಷ: ಹುತಾತ್ಮ ಯೋಧರಿಗೆ ಪುಷ್ಪ ನಮನ.26/11ರ ಮುಂಬೈ ದಾಳಿ ಸಂಚುಕೋರರಿಗೆ ಶಿಕ್ಷೆಯಾಗಲಿ: ಭಾರತ–ಅಮೆರಿಕ ಆಗ್ರಹ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.