ದುಬೈ: ಫೈಜರ್ ಮತ್ತು ಬಯೋಎನ್ಟೆಕ್ ಅಭಿವೃದ್ಧಿಪಡಿಸಿದ ಕೋವಿಡ್– 19 ವಿರುದ್ಧದ ಲಸಿಕೆಯ ತುರ್ತು ಬಳಕೆಗೆ ಬಹರೇನ್ ಅನುಮತಿ ನೀಡಿದೆ.

ಈ ಮೂಲಕ ಬಹರೇನ್, ತುರ್ತು ಸಂದರ್ಭದಲ್ಲಿ ಲಸಿಕೆ ಬಳಕೆಗೆ ಅನುಮತಿ ನೀಡಿದ ಎರಡನೇ ರಾಷ್ಟ್ರವಾಗಿದೆ. ಈ ಲಸಿಕೆ ಬಳಕೆಗೆ ಬ್ರಿಟನ್ ಕಳೆದ ವಾರ ಅನುಮತಿ ನೀಡಿತ್ತು.

ಇದನ್ನೂ ಓದಿ:ಕೋವಿಡ್–19: ಫೈಝರ್ ಲಸಿಕೆಗೆ ಬ್ರಿಟನ್ ಅನುಮತಿ

‘ಲಸಿಕೆ ಪ್ರಯೋಗ, ದತ್ತಾಂಶ ವಿಶ್ಲೇಷಣೆಗಳನ್ನು ಆಧರಿಸಿ ಬಹರೇನ್ನ ರಾಷ್ಟ್ರೀಯ ಆರೋಗ್ಯ ನಿಯಂತ್ರಣ ಪ್ರಾಧಿಕಾರ, ಫೈಜರ್ ಮತ್ತು ಬಯೋಎನ್ಟೆಕ್ ಉತ್ಪಾದಿಸಿದ ಕೋವಿಡ್– 19 ವಿರುದ್ಧದ ಲಸಿಕೆಯನ್ನು ಬಳಸಲು ಅನುಮೋದನೆ ನೀಡಿದೆ’ ಎಂದು ಸರ್ಕಾರಿ ಒಡೆತನದ ಸುದ್ದಿ ಸಂಸ್ಥೆ ಬಹರೇನ್ ನ್ಯೂಸ್ ಏಜೆನ್ಸಿ ತಿಳಿಸಿದೆ.

ಲಸಿಕೆಯ ಎಷ್ಟು ಡೋಸ್ಗಳನ್ನು ಖರೀದಿಸಲಾಗಿದೆ. ಯಾವಾಗಿನಿಂದ ಈ ಲಸಿಕೆಗಳನ್ನು ಜನರಿಗೆ ನೀಡಲು ಆರಂಭಿಸಲಾಗುತ್ತದೆ ಎಂಬ ಮಾಹಿತಿಯನ್ನು ಬಹರೇನ್ ನೀಡಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.