ಢಾಕಾ: ಬಾಂಗ್ಲಾದೇಶದಲ್ಲಿ ಸರ್ಕಾರವನ್ನು ವಿರೋಧಿಸಿ ಪ್ರತಿಭಟನೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ಸಮುದಾಯದವರನ್ನು ಉದ್ದೇಶಿಸಿ ರಾಯಭಾರ ಕಚೇರಿಯು ಎಚ್ಚರಿಕೆಯ ಸಂದೇಶ ರವಾನಿಸಿದೆ.

‘ಸಿಲಹಟ್ನ ಭಾರತೀಯ ಸಹಾಯಕ ಹೈಕಮಿಷನ್ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ವಿದ್ಯಾರ್ಥಿಗಳು ಸೇರಿದಂತೆ ಭಾರತದ ಎಲ್ಲ ಪ್ರಜೆಗಳು ಕಚೇರಿಯ ಜೊತೆ ಸಂಪರ್ಕದಲ್ಲಿ ಇರಬೇಕು ಎಂದು ಮನವಿ ಮಾಡಲಾಗುತ್ತಿದೆ’ ಎಂದು ಕಚೇರಿಯು ‘ಎಕ್ಸ್’ ಮೂಲಕ ಮನವಿ ಮಾಡಿದೆ.

ಅಲ್ಲದೆ, ‘ಅವರು ಎಚ್ಚರಿಕೆಯಿಂದ ಇರಬೇಕು ಎಂದು ಮನವಿ ಮಾಡಲಾಗುತ್ತಿದೆ. ತುರ್ತು ಪರಿಸ್ಥಿತಿ ಎದುರಾದಲ್ಲಿ ಕಚೇರಿಯನ್ನು ಸಂಪರ್ಕಿಸಬೇಕು’ ಎಂದು ಅದು ಹೇಳಿದೆ.

14 ಪೊಲೀಸರು ಮೃತ: ಭಾನುವಾರ ನಡೆದ ಘರ್ಷಣೆಯಲ್ಲಿ ಮೃತಪಟ್ಟವರಲ್ಲಿ 14 ಮಂದಿ ಪೊಲೀಸರು ಸೇರಿದ್ದಾರೆ. ಪ್ರತಿಭಟನಕಾರರು ಪೊಲೀಸ್ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ್ದಾರೆ, ದೇಶದ ಈಶಾನ್ಯ ಭಾಗದ ಪಟ್ಟಣವೊಂದರಲ್ಲಿನ ಠಾಣೆಯ ಮೇಲೆ ದಾಳಿ ನಡೆಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಕೆಲವು ಕಡೆಗಳಲ್ಲಿ ಪ್ರತಿಭಟನಕಾರರನ್ನು ನಿಯಂತ್ರಿಸಲು ಸೇನಾ ಸಿಬ್ಬಂದಿ ಹಾಗೂ ಪೊಲೀಸರು ಮಧ್ಯಪ್ರವೇಶ ಮಾಡಲಿಲ್ಲ.

‘ಬಾಂಗ್ಲಾದೇಶದ ಸೇನೆಯು ಜನರ ವಿಶ್ವಾಸದ ಪ್ರತೀಕವಿದ್ದಂತೆ. ಅದು ಯಾವಾಗಲೂ ಜನರ ಜೊತೆ ನಿಂತಿದೆ. ಜನರ ಹಿತಕ್ಕಾಗಿ ಅದು ಆ ಕೆಲಸವನ್ನು ಮಾಡುತ್ತದೆ...’ ಎಂದು ಸೇನೆಯ ಮುಖ್ಯಸ್ಥ ವಾಕರ್ ಉಜ್ ಜಮಾನ್ ಶನಿವಾರ ಹೇಳಿದ್ದಾರೆ. ಸೇನೆಯು ಪ್ರತಿಭಟನಕಾರರನ್ನು ಬೆಂಬಲಿಸುತ್ತಿದೆಯೇ ಎಂಬುದನ್ನು ಅವರು ಸ್ಪಷ್ಟವಾಗಿ ಹೇಳಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.