ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಗುರುವಾರ ಫೋನ್ ಮೂಲಕ ಮಾತುಕತೆ ನಡೆಸಿದರು. ಈ ವೇಳೆ ‘ಇರಾನ್ ಮತ್ತು ಬೆಂಬಲಿತ ಬಂಡುಕೋರ ಗುಂಪುಗಳಿಂದ ಎದುರಾಗುವ ಎಲ್ಲಾ ರೀತಿಯ ಬೆದರಿಕೆಗಳಿಗೆ ಪ್ರತಿಯಾಗಿ ಇಸ್ರೇಲ್ ರಕ್ಷಿಸಲು ಬದ್ಧ’ ಎಂದು ಒತ್ತಿ ಹೇಳಿದರು.

ಟೆಹರಾನ್ನಲ್ಲಿ ಹಮಾಸ್ನ ಪರಮೋಚ್ಚ ನಾಯಕ ಇಸ್ಮಾಯಿಲ್ ಹನಿಯೆ ಹತ್ಯೆ ನಂತರ ಇರಾನ್ ಪ್ರತೀಕಾರಕ್ಕೆ ಮುಂದಾಗಿರುವಾಗಲೇ ಈ ಭರವಸೆ ನೀಡಿದ್ದಾರೆ.

ಉಪಾಧ್ಯಕ್ಷೆ ಮತ್ತು ಡೆಮಾಕ್ರಟಿಕ್ ಪಕ್ಷದ ಸಂಭವನೀಯ ಅಧ್ಯಕ್ಷೀಯ ಅಭ್ಯರ್ಥಿ ಕಮಲಾ ಹ್ಯಾರಿಸ್ ಕೂಡ ಈ ಸಂದರ್ಭದಲ್ಲಿ ನೆತನ್ಯಾಹು ಅವರೊಂದಿಗೆ ಮಾತನಾಡಿದರು.

ಹನಿಯೆ ಅವರ ಹತ್ಯೆ ಬಗ್ಗೆ ನೆತನ್ಯಾಹು ಅವರ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಪ್ಯಾಲೆಸ್ಟೀನ್ನ ಬಂಡುಕೋರ ಗುಂಪು ಹತ್ಯೆಯ ಹೊಣೆಯನ್ನು ಇಸ್ರೇಲ್ ಮೇಲೆ ಹೊರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.