ವಾಷಿಂಗ್ಟನ್: ಈ ವಾರ ಇಸ್ರೇಲ್ ಪ್ರವಾಸ ಕೈಗೊಂಡಿರುವ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು, ‘ಐ2ಯು2’ ಸಂಘಟನೆಯ ಮೊದಲ ವರ್ಚುವಲ್ ಶೃಂಗಸಭೆಯಲ್ಲಿ ಭಾರತ, ಇಸ್ರೇಲ್ ಹಾಗೂ ಯುಎಇ ನಾಯಕರೊಂದಿಗೆ ಚರ್ಚೆ ನಡೆಸಲಿದ್ದಾರೆ.

‘ಅಧ್ಯಕ್ಷ ಬೈಡನ್ ಅವರು ಜುಲೈ 13ರಿಂದ 16ರ ವರೆಗೆ ಪಶ್ಚಿಮ ಏಷ್ಯಾ ರಾಷ್ಟ್ರಗಳ ಪ್ರವಾಸ ಕೈಗೊಂಡಿದ್ದಾರೆ.‘ಐ2ಯು2’ದಮೊದಲಶೃಂಗಸಭೆಗುರುವಾರನಡೆಯಲಿದೆ’ಎಂದುಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವನ್ ತಿಳಿಸಿದ್ದಾರೆ.

‘ಉಕ್ರೇನ್–ರಷ್ಯಾ ಯುದ್ಧದ ಹಿನ್ನೆಲೆಯಲ್ಲಿ ಜಾಗತಿಕವಾಗಿ ಆಹಾರ ಮತ್ತು ಇಂಧನ ಸಮಸ್ಯೆ ಕಂಡುಬಂದಿದೆ. ಆದರೆ, ಆಹಾರ ಭದ್ರತೆ ಕುರಿತ ಚರ್ಚೆಗೆ ಈ ಶೃಂಗಸಭೆಯಲ್ಲಿ ಹೆಚ್ಚು ಒತ್ತು ನೀಡಲಾಗುತ್ತದೆ’ ಎಂದು ಅವರು ತಿಳಿಸಿದ್ದಾರೆ.

‘ಪ್ರಧಾನಿ ನರೇಂದ್ರ ಮೋದಿ, ಇಸ್ರೇಲ್ ಪ್ರಧಾನಿ ಯಾಯಿರ್ ಲಾಪಿಡ್ ಹಾಗೂ ಯುಎಇ ಅಧ್ಯಕ್ಷ ಮೊಹಮ್ಮದ್ ಬಿನ್ ಝಾಯೇದ್ ಅಲ್ ನಹ್ಯಾನ್ ಅವರೊಂದಿಗೆ ಬೈಡನ್ ಅವರು ಸಭೆ ನಡೆಸುವರು’ ಎಂದು ತಿಳಿಸಿದ್ದಾರೆ.

ನಾಲ್ಕು ರಾಷ್ಟ್ರಗಳ ಸಂಘಟನೆಯೇ ‘ಐ2ಯು2’. ಇಲ್ಲಿ, ‘ಐ’ ಎಂಬುದು ಭಾರತ ಹಾಗೂ ಇಸ್ರೇಲ್ ಅನ್ನು ಸೂಚಿಸಿದರೆ, ‘ಯು’ ಎಂಬುದು ಅಮೆರಿಕ ಹಾಗೂ ಸಂಯುಕ್ತ ಅರಬ್ ಸಂಸ್ಥಾನಗಳನ್ನು (ಯುಎಇ) ಸೂಚಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.