ಬೀಜಿಂಗ್/ಶಾಂಘೈ:ರಾಜಕೀಯ ಸ್ವಾತಂತ್ರ್ಯಕ್ಕಾಗಿ ಮತ್ತು ಕೋವಿಡ್ ಕಠಿಣ ಲಾಕ್ಡೌನ್ ಅಂತ್ಯಕ್ಕಾಗಿ ದೇಶದಾದ್ಯಂತ ಭುಗಿಲೆದ್ದಿರುವ ಸಾರ್ವಜನಿಕ ಪ್ರತಿಭಟನೆಗಳನ್ನು ಹತ್ತಿಕ್ಕಲು ಚೀನಾದ ಕಮ್ಯುನಿಸ್ಟ್ ಸರ್ಕಾರ, ಭದ್ರತಾ ಪಡೆಗಳ ಮೊರೆ ಹೋಗಿದೆ.

ಪರಿಸ್ಥಿತಿ ನಿಯಂತ್ರಿಸಲು ರಸ್ತೆಗಿಳಿದಿರುವ ಭದ್ರತಾ ಪಡೆಗಳು ಸೋಮವಾರ ಹಲವರನ್ನು ವಶಕ್ಕೆ ಪಡೆದಿವೆ. ದೇಶದಲ್ಲಿ ಅಪರೂಪಕ್ಕೆ ನಡೆಯುತ್ತಿರುವ ನಾಗರಿಕರ ಪ್ರತಿಭಟನೆಗಳನ್ನು ತಡೆಯಲು, ಟಿ.ವಿ, ಮುದ್ರಣ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದಿಗಳು ಪ್ರಸಾರವಾಗದಂತೆ ನಿರ್ಬಂಧಿಸಲು ಅಧಿಕಾರಿಗಳು ಯತ್ನಿಸುತ್ತಿದ್ದಾರೆ.

ಬೀಜಿಂಗ್, ಶಾಂಘೈ ನಗರಗಳು ಸೇರಿ ದೇಶದಾದ್ಯಂತ ಪ್ರತಿದಿನ ಕೋವಿಡ್ ಹೊಸ ಪ್ರಕರಣಗಳು ಉಲ್ಬಣಿಸುತ್ತಿವೆ. ಸತತ ಐದನೇ ದಿನವಾದ ಸೋಮವಾರ ಕೂಡ ಸುಮಾರು 40 ಸಾವಿರ ಹೊಸ ಪ್ರಕರಣಗಳು ದೇಶದಲ್ಲಿ ದಾಖಲಾಗಿವೆ.

‘ಅಧ್ಯಕ್ಷ ಷಿ ಜಿನ್ಪಿಂಗ್ ಅಧಿಕಾರದಿಂದ ಕೆಳಗಿಳಿಯಬೇಕು. ಕಠಿಣ ಲಾಕ್ಡೌನ್ ತೆರವುಗೊಳಿಸಬೇಕು, ಕೋವಿಡ್ ಪರೀಕ್ಷೆ ಬೇಡ, ಸ್ವಾತಂತ್ರ್ಯ ಬೇಕು’ ಎಂದು ಒತ್ತಾಯಿಸಿ ನಾಗರಿಕರು ನಡೆಸುತ್ತಿರುವ ಪ್ರತಿಭಟನೆ ಎರಡನೇ ವಾರಕ್ಕೆ ಕಾಲಿಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.