ವಾಷಿಂಗ್ಟನ್: ನಿರಂತರ ಹವಾಮಾನ ಬದಲಾವಣೆಯಿಂದ ಪದೇ ಪದೇ ಚಂಡಮಾರುತಗಳು ಸಂಭವಿಸುವ ಸಾಧ್ಯತೆ ಹೆಚ್ಚು ಎಂದು ನಾಸಾ ಅಧ್ಯಯನ ತಿಳಿಸಿದೆ.

15 ವರ್ಷಗಳ ಮಾಹಿತಿಯನ್ನು ಸಂಗ್ರಹಿಸಿ ಈ ಬಗ್ಗೆ ವಿಶ್ಲೇಷಣೆ ನಡೆಸಲಾಗಿದೆ. ಇದಕ್ಕಾಗಿ ಸಮುದ್ರದ ಮೇಲ್ಮೈ ತಾಪಮಾನ ಮತ್ತು ಭಾರೀ ಚಂಡಮಾರುತಗಳ ಬಗ್ಗೆ ಹೋಲಿಕೆ ಮಾಡಿ ಈ ಅಧ್ಯಯನ ಕೈಗೊಳ್ಳಲಾಗಿದೆ.

ಸಮುದ್ರದ ಮೇಲ್ಮೈ ತಾಪಮಾನ 28 ಡಿಗ್ರಿ ಸೆಲ್ಸಿಯಸ್ಕ್ಕಿಂತಲೂ ಹೆಚ್ಚು ಇದ್ದಾಗ 25 ಕಿಲೋ ಮೀಟರ್ ಪ್ರದೇಶದಲ್ಲಿ ಪ್ರತಿ ಗಂಟೆಗೆ ಮೂರು ಮಿಲಿ ಮೀಟರ್ ಮಳೆ ಸುರಿಸುವ ಭಾರಿ ಚಂಡಮಾರುತಗಳು ಸಂಭವಿಸಿವೆ ಎಂದು ಈ ಅಧ್ಯಯನ ತಿಳಿಸಿದೆ.

‘ಸಮುದ್ರದ ಮೇಲ್ಮೈ ತಾಪಮಾನ ಒಂದು ಡಿಗ್ರಿ ಸೆಲ್ಸಿಯಸ್ನಷ್ಟು ಹೆಚ್ಚಿದರೆ ಶೇಕಡ 21ರಷ್ಟು ಹೆಚ್ಚು ಚಂಡಮಾರುತಗಳು ಸಂಭವಿಸುತ್ತವೆ. ವಾತಾವರಣ ಹೆಚ್ಚು ಬಿಸಿಯಾದಷ್ಟು ಭೀಕರ ಚಂಡಮಾರುತಗಳು ಸೃಷ್ಟಿಯಾಗುತ್ತವೆ ಎನ್ನುವುದು ಇದರಿಂದ ತಿಳಿಯುತ್ತದೆ. ಪ್ರತಿ ವರ್ಷ ಬೇಸಿಗೆ ಕಾಲದಲ್ಲೇ ಅತಿ ಹೆಚ್ಚು ಚಂಡಮಾರುತ ಉಂಟಾಗಿ ಅಪಾರ ಹಾನಿಯಾಗುತ್ತಿದೆ’ ಎಂದು ನಾಸಾ ವಿಜ್ಞಾನಿ ಹರ್ಟ್ಮುತ್ ಔಮಾನ್ನ್ ವಿವರಿಸಿದ್ದಾರೆ.

‘ಹೆಚ್ಚು ಚಂಡಮಾರುತಗಳು ಸಂಭವಿಸಿದರೆ ಹೆಚ್ಚು ಪ್ರವಾಹ ಉಂಟಾಗುತ್ತದೆ. ಇದರಿಂದ ಅಪಾರ ಹಾನಿಯಾಗುತ್ತದೆ. ಹೀಗಾಗಿ, ತಕ್ಷಣವೇ ತಾಪಮಾನ ಹೆಚ್ಚಳವಾಗುವುದನ್ನು ನಿಯಂತ್ರಿಸುವ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಸಲಹೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.