ಲಾಯಿನಾ: ಹವಾಯಿಯ ಮಾಯಿ ಕೌಂಟಿಯಲ್ಲಿ ಕಾಳ್ಗಿಚ್ಚಿನ ಪರಿಣಾಮ ಈವರೆಗೆ 93 ಜನ ಮೃತಪಟ್ಟಿದ್ದಾರೆ.

‘ಮೃತಪಟ್ಟವರ ಗುರುತು ಪತ್ತೆ ಕಾರ್ಯ ಇನ್ನೂ ಆರಂಭಿಕ ಹಂತದಲ್ಲಿದೆ. ಶ್ವಾನಗಳನ್ನು ಬಳಸಿ ಮೃತದೇಹಗಳನ್ನು ಪತ್ತೆ ಹಚ್ಚಲಾಗುತ್ತಿದೆ. ಇಬ್ಬರ ಗುರುತು ಮಾತ್ರ ಪತ್ತೆ ಮಾಡಲಾಗಿದೆ. ಸಿಬ್ಬಂದಿ ಮತ್ತು ಶ್ವಾನ ದಳ ಇಲ್ಲಿಯವರೆಗೆ ಘಟನಾ ಸ್ಥಳದ ಒಟ್ಟು ಪ್ರದೇಶದಲ್ಲಿ ಕೇವಲ ಶೇಕಡ 3ರಷ್ಟು ಭಾಗದಲ್ಲಿ ಹಡುಕಾಟ ನಡೆಸಿವೆ’ ಎಂದು ಮಾಯಿ ಪಟ್ಟಣದ ಪೊಲೀಸ್ ಅಧಿಕಾರಿ ಜಾನ್ ಪಲ್ಲೆಟಿಯರ್ ಮಾಹಿತಿ ನೀಡಿದ್ದಾರೆ.

‘ಹುಡುಕಾಟ ನಡೆಸಬೇಕಿರುವ ಪ್ರದೇಶ ಒಟ್ಟು ಐದು ಚದರ ಮೈಲುಗಳಷ್ಟಿದೆ. ಕಾಳ್ಗಿಚ್ಚಿನಲ್ಲಿ ಸಾವಿಗೀಡಾದವರ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ’ ಎಂದು ಅವರು ತಿಳಿಸಿದ್ದಾರೆ.

ಇದೇ 9 ರಂದು ಹವಾಯಿಯಲ್ಲಿ ಕಾಳ್ಗಿಚ್ಚು ಸಂಭವಿಸಿತ್ತು. ಅವಘಡದಿಂದಾಗಿ 2,200 ಕಟ್ಟಡಗಳು ಹಾನಿಗೀಡಾಗಿದ್ದವು. ಅಲ್ಲದೇ, 4,500 ಮಂದಿ ನಿರಾಶ್ರಿತ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ.

ಕಾಳ್ಗಿಚ್ಚಿನ ಜ್ವಾಲೆ ಮತ್ತು ಡೋರ ಚಂಡಮಾರುತ ದಕ್ಷಿಣದೆಡೆಗೆ ಬಿರುಸಾಗಿ ಸಾಗಿ ಮಾಯು ಮತ್ತು ಹವಾಯಿ ದ್ವೀಪವನ್ನು ಆವರಿಸಿದ್ದರಿಂದ ಅವಘಡ ಸಂಭವಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.