ನವದೆಹಲಿ: ಭಾರತವು ತನ್ನ ಸ್ನೇಹಿರಾಷ್ಟ್ರ ವಿಯೆಟ್ನಾಂಗೆ ಯುದ್ಧ ವಿಮಾನ ‘ಐಎನ್‌ಎಸ್ ಕೃಪಾಣ್’ ಅನ್ನು ಕೊಡುಗೆ ನೀಡಿದೆ. ನೌಕಾಪಡೆಯ ಚೀಫ್ ಅಡ್ಮಿರಲ್ ಆರ್.ಹರಿಕುಮಾರ್ ಅವರು ವಿಯೆಟ್ನಾಂ ಪೀಪಲ್ಸ್ ನೇವಿಗೆ ಇದನ್ನು ಹಸ್ತಾಂತರಿಸಿದರು.

ಹಿಂದೂ ಮಹಾಸಾಗರ ವಲಯದಲ್ಲಿ ತನ್ನ ಅಸ್ತಿತ್ವ ವಿಸ್ತರಿಸುತ್ತಿರುವ ಚೀನಾದ ಕಾರ್ಯತಂತ್ರದ ತಡೆ ಕ್ರಮವಾಗಿ ಭಾರತವು ಇದನ್ನುನೀಡಿದೆ. ಯುದ್ಧನೌಕೆಗೆ ದೇಶಿ ತಯಾರಿಕೆಯ ಕ್ಷಿಪಣಿ ಅಳವಡಿಸಿದ ನಂತರ ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಳಿಸಲಾಯಿತು.

ವಿಯೆಟ್ನಾಂ ಸಿಬ್ಬಂದಿಗೆ ಭಾರತೀಯ ಸಿಬ್ಬಂದಿಯು ಕೆಲ ಕಾಲ ತರಬೇತಿ ನೀಡಲಿದ್ದಾರೆ. ದೇಶಿ ತಯಾರಿಕೆಯ ಈ ಯುದ್ಧ ನೌಕೆಯು ನೌಕಾಪಡೆಯಲ್ಲಿ 32 ವರ್ಷ ಇತ್ತು. ಈಗ ಇದಕ್ಕೆ ಮಧ್ಯಮ ಮತ್ತು ಹತ್ತಿರದ ನೆಲೆ ಗುರಿಯಾಗಿಸಿ ಪ್ರಯೋಗಿಸಬಹುದಾದ ಗನ್‌ಗಳು, ಲಾಂಚರ್‌ಗಳು, ಕ್ಷಿಪಣಿಗಳನ್ನು ಅಳವಡಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.