ನವದೆಹಲಿ: ಪರಸ್ಪರ ವಿಶ್ವಾಸ ಮರುಸ್ಥಾಪಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ನೀಲನಕ್ಷೆ ಸಿದ್ಧಪಡಿಸಲು ಭಾರತ ಮತ್ತು ಚೀನಾ ಸಮ್ಮತಿಸಿವೆ.

ಚೀನಾದ ರಕ್ಷಣಾ ಸಚಿವ ಡೊಂಗ್ ಜುನ್ ಅವರೊಂದಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬುಧವಾರ ಲಾವೊಸ್ನ ರಾಜಧಾನಿ ವಿಯೆಂಟೈನಲ್ಲಿ ನಡೆಸಿದ ನಿಯೋಗ ಮಟ್ಟದ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.

‘ಅನಪೇಕ್ಷಿತ ಗಡಿ ಕಲಹ’ದಿಂದ ಪಾಠ ಕಲಿಯಬೇಕಾಗಿದೆ ಎಂದು ರಾಜನಾಥ್ ಸಿಂಗ್ ಅವರು ಅಭಿಪ್ರಾಯಪಟ್ಟರು.

ಪೂರ್ವ ಲಡಾಖ್ನ ಭಾರತ ಮತ್ತು ಚೀನಾ ಗಡಿಯಲ್ಲಿ ಉಭಯ ರಾಷ್ಟ್ರಗಳು ನಿಯೋಜಿಸಿದ್ದ ಸೇನಾ ವಾಪಸಾತಿ ಪ್ರಕ್ರಿಯೆ ಮುಗಿದ ವಾರದ ನಂತರ ಈ ಮಾತುಕತೆ ನಡೆದಿದೆ.

10 ರಾಷ್ಟ್ರಗಳು ಸದಸ್ಯರಾಗಿರುವ ಆಸಿಯಾನ್ ಶೃಂಗ ಸಭೆಗೆ ಈ ಮುಖಂಡರು ಲಾವೊಸ್ಗೆ ಆಗಮಿಸಿದ್ದರು. ನಿಯೋಗ ಹಂತದ ಚರ್ಚೆ ಕುರಿತು ರಾಜನಾಥ್ ಸಿಂಗ್ ಅವರ ಕಚೇರಿಯು ‘ಎಕ್ಸ್’ನಲ್ಲಿ ಮಾಹಿತಿ ಹಂಚಿಕೊಂಡಿದೆ.

ಉಭಯ ದೇಶಗಳು ನೆರೆರಾಷ್ಟ್ರಗಳಾಗಿಯೇ ಮುಂದುವರಿಯಬೇಕಾಗಿದೆ. ಹೀಗಾಗಿ, ಬಿಕ್ಕಟ್ಟಿನ ಬದಲಾಗಿ ಸಹಕಾರ ಕುರಿತು ಹೆಚ್ಚಿನ ಗಮನ ಹರಿಸಬೇಕಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು ಎಂದು ತಿಳಿಸಿದೆ.

ಡೆಮ್ಚೊಕ್ ಮತ್ತು ಡೆಪ್ಸಾಂಗ್ ಪ್ರದೇಶದಿಂದ ಸೇನೆಯನ್ನು ಉಭಯ ರಾಷ್ಟ್ರಗಳ ಸೇನೆ ಹಿಂಪಡೆಯಲಾಗಿದೆ. ಅಲ್ಲದೆ, ಅಲ್ಲದೆ ಉಭಯ ಸೇನೆಗಳು ಗಸ್ತು ಚಟುವಟಿಕೆಗಳನ್ನು ಆರಂಭಿಸಿವೆ.

ಲಾವೊಸ್ನಲ್ಲಿ ಆಸಿಯಾನ್ ರಾಷ್ಟ್ರಗಳ ರಕ್ಷಣಾ ಸಚಿವರ ಸಭೆಯು ನಡೆಯುತ್ತಿದೆ. ಭಾರತವಲ್ಲದೆ ಚೀನಾ, ಆಸ್ಟ್ರೇಲಿಯ, ಜಪಾನ್, ನ್ಯೂಜಿಲೆಂಡ್, ಕೊರಿಯಾ, ರಷ್ಯಾ, ಅಮೆರಿಕದ ರಕ್ಷಣಾ ಮುಖ್ಯಸ್ಥರು ಭಾಗವಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.