ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಂಗ್ಲಾದೇಶ: ನಿಷೇಧಾಜ್ಞೆ ನಡುವೆಯೇ ಪ್ರತಿಭಟನೆ

ಮೀಸಲಾತಿ ವಿರೋಧಿ ಹೋರಾಟ: ಸಾವಿನ ಸಂಖ್ಯೆ ಏರಿಕೆ
Published : 20 ಜುಲೈ 2024, 16:08 IST
Last Updated : 20 ಜುಲೈ 2024, 16:08 IST
ಫಾಲೋ ಮಾಡಿ
Comments
ಭಾರತಕ್ಕೆ ಮರಳಿದ ಭಾರತೀಯ ವಿದ್ಯಾರ್ಥಿಗಳು
ಅಗರ್ತಲಾ/ಕೋಲ್ಕತ್ತ (ಪಿಟಿಐ): ಬಾಂಗ್ಲಾದೇಶದಲ್ಲಿ ಮೀಸಲಾತಿಗೆ ಸಂಬಂಧಿಸಿದಂತೆ ಹಿಂಸಾಚಾರ ನಡೆಯುತ್ತಿರುವ ಕಾರಣ ಸುಮಾರು 100 ವಿದ್ಯಾರ್ಥಿಗಳು ತ್ರಿಪುರಾದ ಎರಡು ಪ್ರಮುಖ ಚೆಕ್‌ಪಾಯಿಂಟ್‌ಗಳ ಮೂಲಕ ಶನಿವಾರ ಭಾರತಕ್ಕೆ ಮರಳಿದ್ದಾರೆ ಎಂದು ಗಡಿ ಭದ್ರತಾ ಪಡೆ ತಿಳಿಸಿದೆ.  ಭಾರತೀಯ ವಿದ್ಯಾರ್ಥಿಗಳ ಜೊತೆ ವಿದೇಶಿ ವಿದ್ಯಾರ್ಥಿಗಳೂ ದೇಶಕ್ಕೆ ಮರಳಿದ್ದಾರೆ. ಈಗಾಗಲೇ ಸುಮಾರು 100 ವಿದ್ಯಾರ್ಥಿಗಳು ವಾಪಸ್ಸಾಗಿದ್ದು ಇನ್ನೂ ಸುಮಾರು 240 ವಿದ್ಯಾರ್ಥಿಗಳು ವಾಪಸ್ಸಾಗುವ ನಿರೀಕ್ಷೆ ಇದೆ ಹಲವು ವಿದ್ಯಾರ್ಥಿಗಳು ದೇಶಕ್ಕೆ ಮರಳಲಿದ್ದಾರೆ ಎಂದು ತ್ರಿಪುರಾದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪಶ್ಚಿಮ ಬಂಗಾಳದ ಮೂಲಕವೂ ವಿದ್ಯಾರ್ಥಿಗಳು ಭಾರತಕ್ಕೆ ಮರಳುತ್ತಿದ್ದು ಈ ವರೆಗೆ ನೇಪಾಳದ ಐವರು ವಿದ್ಯಾರ್ಥಿಗಳು ಫುಲ್ಬರಿ ಗಡಿ ಮೂಲಕ ಆಗಮಿಸಿದ್ದಾರೆ. ಮೆಕ್ಲಿಗಂಜ್‌ ಗಡಿ ಮೂಲಕ ಆರು ಭಾರತೀಯ ವಿದ್ಯಾರ್ಥಿಗಳು ಆಗಮಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT