ಮಾಸ್ಕೊ:ಮನುಷ್ಯರನ್ನೇ ಹೋಲುವ ‘ಫಿಡೋರ್’ ರೋಬೊ ಹೊತ್ತೊಯ್ದಿದ್ದ ರಷ್ಯಾದ ಮಾನವರಹಿತ ಗಗನನೌಕೆ, ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದ(ಐಎಸ್ಎಸ್)ಜತೆ ಜೋಡಣೆಯಾಗುವಲ್ಲಿ (ಡಾಕಿಂಗ್) ವಿಫಲವಾಗಿದೆ.

‘ಸೊಯುಜ್ ಎಂಎಸ್ 14’ ರಾಕೆಟ್ ಗುರುವಾರ ಉಡಾವಣೆಯಾಗಿತ್ತು. ನಿಗದಿಯಂತೆ ಶನಿವಾರ ಬೆಳಗ್ಗೆ 5.30ಕ್ಕೆ
ಐಎಸ್ಎಸ್ಗೆ ಈ ನೌಕೆ ಜೋಡಣೆಯಾಗಬೇಕಿತ್ತು. ಆದರೆ ‘ಐಎಸ್ಎಸ್ಗೆ 100 ಮೀ.ದೂರದಲ್ಲಿರುವಾಗ ನಿಗದಿತ ಪಥದಲ್ಲಿ ನೌಕೆ ಮುಂದುವರಿದಿಲ್ಲ. ಹೀಗಾಗಿ ರಷ್ಯಾದ ಅಂತರಿಕ್ಷಯಾತ್ರಿಗಳು ಕೊನೇ ಕ್ಷಣದಲ್ಲಿ ಸ್ವಯಂಚಾಲಿತ ಜೋಡಣೆ ಪ್ರಕ್ರಿಯೆಯನ್ನುರದ್ದುಗೊಳಿಸಿದರು’ ಎಂದು ನಾಸಾ ಪ್ರಕಟಣೆಯಲ್ಲಿ ತಿಳಿಸಿದೆ.

‘ಐಎಸ್ಎಸ್ನಲ್ಲಿನ ಸಮಸ್ಯೆಯಿಂದಾಗಿ ಜೋಡಣೆ ಸಾಧ್ಯವಾಗಲಿಲ್ಲ. ಸೊಯುಜ್ ನೌಕೆಯಲ್ಲಿ ಯಾವುದೇ ತಾಂತ್ರಿಕ ಸಮಸ್ಯೆ ಕಂಡುಬಂದಿಲ್ಲವೆಂದು ರಷ್ಯಾದ ವಿಜ್ಞಾನಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.