ಪಾಮ್ ಬೀಚ್ (ಅಮೆರಿಕ): ಮೂರು ವಿವಿಧ ಟಿ.ವಿ ಚಾನೆಲ್ಗಳಲ್ಲಿ ಸಂವಾದ ನಡೆಸುವ ಪ್ರಸ್ತಾಪವನ್ನು ಕಮಲಾ ಹ್ಯಾರಿಸ್ ಅವರ ಮುಂದಿಟ್ಟಿರುವುದಾಗಿ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
.ಕಮಲಾ ಡೆಮಾಕ್ರಟಿಕ್ ಅಧ್ಯಕ್ಷೀಯ ಅಭ್ಯರ್ಥಿ; ಟ್ರಂಪ್ ನಡುವೆ ನೇರ ಸ್ಪರ್ಧೆ.
ಇದಕ್ಕಾಗಿ ಸೆಪ್ಟೆಂಬರ್ನಲ್ಲಿ ಕೆಲವು ದಿನಾಂಕಗಳನ್ನು ಪಟ್ಟಿ ಮಾಡಿದ್ದು, ಕಮಲಾ ಹ್ಯಾರಿಸ್ ಇದಕ್ಕೆ ಇನ್ನೂ ಒಪ್ಪಿಕೊಂಡಿಲ್ಲ ಎಂದು ಟ್ರಂಪ್ ಹೇಳಿದ್ದಾರೆ.

ಫ್ಲೊರಿಡಾ ಬೀಚ್ ಸೈಡ್ ಕಂಪೌಂಡ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
.ಬೈಡನ್ ವಿರುದ್ಧ ಷಡ್ಯಂತರ ರೂಪಿಸಿದ ಡೆಮಾಕ್ರಟಿಕ್ ಪಕ್ಷ: ಟ್ರಂಪ್ ಆರೋಪ.
ಸಂವಾದಕ್ಕಾಗಿ ಫಾಕ್ಸ್ ನ್ಯೂಸ್, ಎಬಿಸಿ ನ್ಯೂಸ್ ಹಾಗೂ ಎನ್ಬಿಸಿ ನ್ಯೂಸ್ನೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಟ್ರಂಪ್ ಹೇಳಿದ್ದಾರೆ. ’ಸಂವಾದಕ್ಕೆ ನಾನು ಎದುರು ನೋಡುತ್ತಿದ್ದೇನೆ. ಯಾಕೆಂದರೆ ನಾವು ದಾಖಲೆ ಸೃಷ್ಠಿಸಬೇಕಿದೆ’ ಎಂದು ಹೇಳಿದ್ದಾರೆ.
.ಅಧ್ಯಕ್ಷೀಯ ಚುನಾವಣೆ | ಕಮಲಾ ಹ್ಯಾರಿಸ್ ‘ಅಸಮರ್ಥರು’: ಟ್ರಂಪ್ ವಾಗ್ದಾಳಿ .
ಈ ಬಗ್ಗೆ ಕಮಲಾ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಬೈಡನ್ ಅವರು ಚುನಾವಣೆಯಿಂದ ಹಿಂದೆ ಸರಿದ ಬಳಿಕ ಕಮಲಾ ಹ್ಯಾರಿಸ್, ಯಾವುದೇ ಪತ್ರಿಕಾಗೋಷ್ಠಿ ಮಾಡಿಲ್ಲ, ಸಂದರ್ಶನವೂ ನೀಡಿಲ್ಲ ಎಂದು ಟ್ರಂಪ್ ಇದೇ ವೇಳೆ ಟೀಕಿಸಿದರು.
.ಟ್ರಂಪ್ ಹತ್ಯೆ ಯತ್ನ: ಸ್ವತಂತ್ರ ತಜ್ಞರ ತಂಡ ರಚನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.