ನ್ಯೂಯಾರ್ಕ್: ಭಾರತೀಯ ಮೂಲದ ಚಾಲಕನೊಬ್ಬ ಕಂಠಪೂರ್ತಿ ಪಾನಮತ್ತನಾಗಿ ಟ್ರಕ್ ಚಲಾಯಿಸಿ ಕಾರಿಗೆ ಡಿಕ್ಕಿ ಹೊಡೆದಿದ್ದರಿಂದ ಕಾರಿನಲ್ಲಿದ್ದ ಇಬ್ಬರು ಬಾಲಕರು ಮೃತಪಟ್ಟ ಘಟನೆ ನ್ಯೂಯಾರ್ಕ್‌ನ ಲಾಂಗ್ ಐಸ್‌ಲ್ಯಾಂಡ್‌ನಲ್ಲಿ ಗುರುವಾರ ನಡೆದಿದೆ.

ಚಾಲಕನನ್ನು 34 ವರ್ಷ ವಯಸ್ಸಿನ ಅಮನದೀಪ್ ಸಿಂಗ್ ಎಂದು ಗುರುತಿಸಲಾಗಿದ್ದು, ಸದ್ಯ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ನಾರ್ತ್ ಬ್ರಾಡ್‌ವೇ ನಲ್ಲಿ ಹೋಗುತ್ತಿದ್ದಾಗ ಕಂಠಪೂರ್ತಿ ಕುಡಿದಿದ್ದ ಅಮನದೀಪ್ ಎದುರಿಗೆ ಬರುತ್ತಿದ್ದ ಸೆಡಾನ್ ಕಾರಿಗೆ ಭೀಕರವಾಗಿ ಡಿಕ್ಕಿ ಹೊಡೆಸಿದ್ದಾನೆ. ಇದರಿಂದ ಕಾರಿನಲ್ಲಿದ್ದ 14 ವರ್ಷ ವಯಸ್ಸಿನ ಡ್ರೇವ್, ಇಥನ್ ಎಂಬ ಇಬ್ಬರು ಬಾಲಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನಿಬ್ಬರು ಯುವಕರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.

ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಪೊಲೀಸ್ ಅಧಿಕಾರಿ ಸ್ಟೀಪನ್ ಫಿಜ್‌ಫ್ಯಾಟ್ರಿಕ್ ನಾನು ನನ್ನ ವೃತ್ತಿ ಜೀವನದಲ್ಲಿ ನೋಡಿರುವ ಭೀಕರ ದುರಂತ ಇದು ಎಂದು ಹೇಳಿದ್ದಾರೆ.

ನ್ಯೂಯಾರ್ಕ್‌ನಲ್ಲಿ ಸರಕು ಸಾಗಣೆ ವಾಹನದ ಚಾಲಕನಾಗಿರುವ ಆರೋಪಿ ಅಮನದೀಪ್ ಈ ಅಪಘಾತ ಮಾಡುವ ಮುನ್ನ ಇನ್ನೊಂದು ವಾಹನಕ್ಕೆ ಡಿಕ್ಕಿ ಮಾಡಿದ್ದ. ಆ ಕಾರಿನಲ್ಲಿದ್ದ ಇಬ್ಬರು ಮಹಿಳೆಯರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆತನನ್ನು ವೈದ್ಯಕೀಯ ತಪಾಸಣೆ ಮಾಡಿದಾಗ ವಿಪರೀತ ಮದ್ಯ ಸೇವಿಸಿದ್ದ ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.