ವಾಷಿಂಗ್ಟನ್: ಅಮೆರಿಕ – ಭಾರತದ ಸಂಬಂಧವನ್ನು ಬೆಂಬಲಿಸುವ ಸಂಸತ್ (ಕೆಳಮನೆ) ಸದಸ್ಯ ಆಫ್ರಿಕಾ ಮೂಲದ ಗ್ರೆಗೊರಿ ಮೀಕ್ಸ್ ಅವರನ್ನು ವಿದೇಶಾಂಗ ನೀತಿ ರೂಪಿಸುವ ಕೆಳಮನೆಯ ಸಂಸತ್ತಿನ ವಿದೇಶಾಂಗ ವ್ಯವಹಾರಗಳ ಸಮಿತಿಗೆ ಮುಂದಿನ ಅಧ್ಯಕ್ಷರನ್ನಾಗಿ ಗುರುವಾರ ಆಯ್ಕೆ ಮಾಡಲಾಗಿದೆ.

ಈ ಮೂಲಕ ಆಫ್ರಿಕನ್– ಅಮೆರಿಕನ್ ಸದಸ್ಯರೊಬ್ಬರು ಮೊದಲ ಬಾರಿಗೆ ಕೆಳಮನೆ ಸದನ ಸಮಿತಿಯ ಅಧ್ಯಕ್ಷರಾಗಿ ಆಯ್ಕೆ ಆದಂತಾಗಿದೆ.

ಡೆಮಾಕ್ರಟಿಕ್ ಪಕ್ಷದ ಕಾಂಗ್ರೆಸ್ ಸದಸ್ಯ ನ್ಯೂಯಾರ್ಕ್‌ನ ಎಲಿಯೋಟ್ ಏಂಗಲ್ ಈಗ ಈ ಸ್ಥಾನದಲ್ಲಿದ್ದಾರೆ. ಮುಂದಿನ ವರ್ಷ ನಡೆಯಲಿರುವ 117ನೇ ಕಾಂಗ್ರೆಸ್‌ನಲ್ಲಿ 67 ವರ್ಷದ ಗ್ರೆಗೊರಿ ಮೀಕ್ಸ್ ಅವರು ಸದನದ ವಿದೇಶಾಂಗ ವ್ಯವಹಾರಗಳ ಸಮಿತಿಯ ಅಧ್ಯಕ್ಷರಾಗಿ ನೇಮಕಗೊಳ್ಳಲಿದ್ದಾರೆ.

ಬ್ಲ್ಯಾಕ್ ಕ್ಯಾಕಸ್‌ನ ಪ್ರಮುಖ ಸದಸ್ಯರೂ ಆಗಿರುವ ಮೀಕ್ಸ್ ಅವರು, ಅಕ್ಟೋಬರ್ 2 ರಂದು ಗಾಂಧಿ ಪ್ಲಾಜಾದಲ್ಲಿ ನಡೆದ ಮಹಾತ್ಮ ಗಾಂಧೀಜಿಯವರ ಜನ್ಮದಿನಾಚರಣೆಯಲ್ಲಿ, ಗಾಂಧಿ ಪ್ರತಿಮೆಗೆ ಪುಷ್ಪಗುಚ್ಛ ಅರ್ಪಿಸುವ ಮೂಲಕ ಗೌರವ ಸಲ್ಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.