ಜೆರುಸಲೇಂ: ಖಾನ್ ಯೂನಿಸ್ನಲ್ಲಿ ನಡೆಸಿದ ದಾಳಿಯಲ್ಲಿ ಹಮಾಸ್ನ ಹಿರಿಯ ಅಧಿಕಾರಿ ಇಝ್-ಅಲ್ ದೀನ್ ಕಸಬ್ರನ್ನು ಕೊಂದು ಹಾಕಿರುವುದಾಗಿ ಇಸ್ರೇಲ್ ಸೇನೆ ಶುಕ್ರವಾರ ಹೇಳಿದೆ.
.ಗಾಜಾ, ಬೈರೂತ್ ಮೇಲೆ ನಿಲ್ಲದ ಇಸ್ರೇಲ್ ದಾಳಿ: 64 ಮಂದಿ ಸಾವು, ಕದನ ವಿರಾಮ ಮರೀಚಿಕೆ.
ಗಾಜಾ ಪಟ್ಟಿಯಲ್ಲಿರುವ ಇತರ ಸಂಘಟನೆಗಳೊಂದಿಗೆ ಸಮನ್ವಯ ವಹಿಸುವಲ್ಲಿ ಕಸಬ್ ಪ್ರಮುಖ ಪಾತ್ರ ವಹಿಸುತ್ತಿದ್ದರು. ಅಲ್ಲದೆ ಹಮಾಸ್ನ ಉನ್ನತ ಶ್ರೇಣಿಯ ನಾಯಕರಾಗಿದ್ದರು ಎಂದು ಇಸ್ರೇಲ್ ಹೇಳಿದೆ.

ಕಸಬ್ ಸಾವನ್ನು ಹಮಾಸ್ ಬಂಡುಕೋರ ಸಂಘಟನೆಯೂ ಖಚಿತ ಪಡಿಸಿದ್ದು, ‘ಅವರ ಸಾವಿಗೆ ದುಃಖ ವ್ಯಕ್ತ ಪಡಿಸುತ್ತೇವೆ’ ಎಂದು ಹೇಳಿದೆ. ಅಲ್ಲದೆ ಮತ್ತೊಬ್ಬ ಅಧಿಕಾರಿ ಐಮನ್ ಆಯೆಷ್ ಕೂಡ ಇಸ್ರೇಲ್ ದಾಳಿಯಲ್ಲಿ ಮೃತಪಟ್ಟಿದ್ದಾರೆ ಎಂದು ಹಮಾಸ್ ಪ್ರಕಟಣೆಯಲ್ಲಿ ತಿಳಿಸಿದೆ.
.ಉತ್ತರ ಗಾಜಾ ಮೇಲೆ ಇಸ್ರೇಲ್ ದಾಳಿ: 93 ಸಾವು.
ಕಸಬ್, ಗಾಜಾದಲ್ಲಿ ಸ್ಥಳೀಯ ಗುಂಪಿನ ಅಧಿಕಾರಿಯಾಗಿದ್ದರೂ, ಅದರ ನಿರ್ಧಾರ ತೆಗೆದುಕೊಳ್ಳುವ ರಾಜಕೀಯ ಕಚೇರಿಯ ಸದಸ್ಯರಲ್ಲ ಎಂದು ಹಮಾಸ್ ಮೂಲಗಳು ತಿಳಿಸಿವೆ.
.ಇಸ್ರೇಲ್ ದಾಳಿಯ ಹಿಂದೆ ಅಮೆರಿಕ: ಆರೋಪಿಸಿ ಎಚ್ಚರಿಕೆ ನೀಡಿದ ಇರಾನ್ ಅಧ್ಯಕ್ಷ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.