ಕೊಲಂಬೊ: ಶ್ರೀಲಂಕಾ ಅಧ್ಯಕ್ಷೀಯ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಇದ್ರೂಸ್ ಮೊಹಮದ್ ಇಲ್ಯಾಸ್ (79) ಅವರು ಗುರುವಾರ ರಾತ್ರಿ ಮೃತಪಟ್ಟಿದ್ದಾರೆ.

ಇಲ್ಯಾಸ್ ಅವರಿಗೆ ಹೃದಯಾಘಾತವಾಗಿತ್ತು. ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗಮಧ್ಯೆ ನಿಧನರಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಇಲ್ಯಾಸ್ ಅವರು ಶ್ರೀಲಂಕಾದ ಉತ್ತರದಲ್ಲಿರುವ ಜಾಫ್ನಾ ಜಿಲ್ಲೆಯಿಂದ 1990ರ ದಶಕದಲ್ಲಿ ಸಂಸತ್ತಿಗೆ ಆಯ್ಕೆಯಾಗಿದ್ದರು.

ಅಧ್ಯಕ್ಷೀಯ ಚುನಾವಣೆಯು ಸೆಪ್ಟೆಂಬರ್ 21 ರಂದು ನಡೆಯಲಿದೆ. ಒಟ್ಟು 39 ಅಭ್ಯರ್ಥಿಗಳು ಕಣದಲ್ಲಿದ್ದು, ಅಭ್ಯರ್ಥಿಗಳ ಪಟ್ಟಿಯಲ್ಲಿ ಇಲ್ಯಾಸ್ ಹೆಸರು ಹಾಗೂ ಅವರ 'ಸಿರಿಂಜ್' ಚಿಹ್ನೆ 4ನೇ ಸ್ಥಾನದಲ್ಲಿವೆ. ನಿಧನದ ಹೊರತಾಗಿಯೂ ಅವರ ಹೆಸರನ್ನು ಕೈಬಿಡುವುದಿಲ್ಲ ಎಂದು ಚುನಾವಣಾ ಆಯೋಗ ತಿಳಿಸಿದೆ.

ಹಾಲಿ ಅಧ್ಯಕ್ಷ ಹಾಗೂ ಯುನೈಟೆಡ್ ನ್ಯಾಷನಲ್ ಪಕ್ಷದ (ಯುಎನ್‌ಪಿ) ರಾನಿಲ್ ವಿಕ್ರಮಸಿಂಘೆ, ವಿರೋಧ ಪಕ್ಷ ಸಮಗಿ ಜನ ಬಲವೆಗಯ (ಎಸ್‌ಜೆಬಿ) ನಾಯಕ ಸಾಜಿತ್ ಪ್ರೇಮದಾಸ ಮತ್ತು ಮಾರ್ಕ್ಸ್‌ವಾದಿ ಜನತಂತ್ರ ವಿಮಕ್ತಿ ಪೆರಮುನಾ (ಜೆವಿಪಿ) ಪಕ್ಷದ ಅನುರ ಕುಮಾರ ದಿಸ್ಸನಾಯಕೆ ಕಣದಲ್ಲಿರುವ ಪ್ರಮುಖರು.

1994ರಲ್ಲಿ ಪ್ರಮುಖ ಸ್ಪರ್ಧಿಯಾಗಿದ್ದ ಜಮಿನಿ ದಿಸ್ಸನಾಯಕೆ ಅವರನ್ನು ಚುಣಾವಣಾ ಪ್ರಚಾರದ ವೇಳೆ ಬಾಂಬ್ ಸ್ಫೋಟಿಸಿ ಹತ್ಯೆ ಮಾಡಲಾಗಿತ್ತು. ನಂತರ ಅವರ ಪತ್ನಿ ಸ್ರಿಮಾ ದಿಸ್ಸನಾಯಕೆ ಕಣಕ್ಕಿಳಿದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.