ಲಂಡನ್: ‘ಅಮೆರಿಕದ ನಿರೂಪಕಿ ಓಪ್ರಾ ವಿನ್‌ಫ್ರೆ ಅವರಿಗೆ ನೀಡಿದ ಸಂದರ್ಶನದಲ್ಲಿ ರಾಜಕುಮಾರ ಹ್ಯಾರಿ ಪತ್ನಿ ಮೇಘನ್ ಮಾರ್ಕೆಲ್ ಹೇಳಿರುವುದನ್ನು ನಾನು ಈಗಲೂ ನಂಬುವುದಿಲ್ಲ’ ಎಂದು ಬ್ರಿಟನ್‌ನ ಐಟಿವಿ ನಿರೂಪಕರಾಗಿದ್ದ ಪಿಯರ್ಸ್ ಮೋರ್ಗನ್ ಬುಧವಾರ ಹೇಳಿದ್ದಾರೆ.

ಐಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಗುಡ್ ಮಾರ್ನಿಂಗ್ ಬ್ರಿಟನ್ ಕಾರ್ಯಕ್ರಮವನ್ನುಮೋರ್ಗನ್ ನಡೆಸಿ ಕೊಡುತ್ತಿದ್ದರು. ಮೇಘನ್ ಅವರನ್ನು ಪದೇಪದೇ ಟೀಕಿಸುತ್ತಿದ್ದಕ್ಕಾಗಿ ಮೋರ್ಗನ್, ಮಂಗಳವಾರವಷ್ಟೇ ಐಟಿವಿ ಸುದ್ದಿವಾಹಿನಿ ತೊರೆದಿದ್ದಾರೆ.

‘ರಾಜಕುಮಾರ ಪ್ರಿನ್ಸ್ ಅವರನ್ನು ಮದುವೆಯಾದ ನಂತರ ರಾಜಮನೆತನದಿಂದ ಸಾಕಷ್ಟು ನಿಂದನೆಗೆ ಒಳಗಾದೆ. ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂಬ ಯೋಚನೆಯೂ ಹಲವು ಸಲ ಬಂದಿತ್ತು’ ಎಂದು ಹೇಳಿದ್ದ ಮೇಘನ್, ಹಲವಾರು ವಿಷಯಗಳನ್ನು ಸಂದರ್ಶನದಲ್ಲಿ ಹಂಚಿಕೊಂಡಿದ್ದರು.

‘ಸಂದರ್ಶನ ನೋಡಿದೆ. ಮೇಘನ್ ಹೇಳಿದ್ದನ್ನು ನಾನು ನಂಬುವುದಿಲ್ಲ. ನೀವು ನಂಬುತ್ತಿದ್ದರೆ ಒಳ್ಳೆಯದು’ ಎಂದು ಮೋರ್ಗನ್ ಟ್ವೀಟ್ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.