ಕೊಲಂಬೊ: ಶ್ರೀಲಂಕಾ ಪ್ರವಾಸದಲ್ಲಿರುವ ಭಾರತೀಯ ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿ.ಆರ್.ಚೌಧರಿ ಅವರು ಮಂಗಳವಾರ ದೇಶದ ಪ್ರಮುಖ ಸೇನಾ ನಾಯಕರನ್ನು ಭೇಟಿಯಾಗಿ ದ್ವಿಪಕ್ಷೀಯ ಮಹತ್ವದ ವಿಷಯಗಳನ್ನು ಚರ್ಚಿಸಿದರು. ಉಭಯ ದೇಶಗಳ ಸುದೀರ್ಘ ಸ್ನೇಹ ಸಂಬಂಧವನ್ನೂ ಮೆಲುಕು ಹಾಕಿದರು.

ಶ್ರೀಲಂಕಾ ಸೇನಾಪಡೆಯ ಬಲವರ್ಧನೆ ಉದ್ದೇಶದಿಂದ ಎಎನ್–32 ಪ್ರೊಪೆಲ್ಲರ್ಗಳನ್ನು ಉಡುಗೊರೆಯಾಗಿ ನೀಡಿದರು ಎಂದು ಕೊಲಂಬೊದಲ್ಲಿರುವ ಭಾರತ ಹೈಕಮಿಷನ್ ಟ್ವೀಟ್ ಮಾಡಿದೆ.

ಮೇಜರ್ ಜನರಲ್ ಸೇನಾರಥ್ ಯಪ ರಕ್ಷಣಾ ಕಾಲೇಜಿಗೆ ಭೇಟಿ ನೀಡಿ 10 ಮಿಲಿಯನ್ ಶ್ರೀಲಂಕಾ ರೂಪಾಯಿ (₹25.84 ಲಕ್ಷ) ಮೌಲ್ಯದ ಪುಸ್ತಕಗಳನ್ನು ಉಡುಗೊರೆಯಾಗಿ ನೀಡಿದರು.

ವಿ.ಆರ್.ಚೌಧರಿ ಅವರು ಸೋಮವಾರದಿಂದ ನಾಲ್ಕು ದಿನಗಳ ಕಾಲ ಶ್ರೀಲಂಕಾದಲ್ಲಿ ಇರಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.