ಐಲ್ಯಾಂಡ್‌ನ ರಾಜಧಾನಿ ರೇಜಾವಿಕ್‌ನಿಂದ (Raykjavik) ಕೇವಲ 40 ಕಿಲೋಮೀಟರ್ ದೂರದಲ್ಲಿ ಜ್ವಾಲಾಮುಖಿ ಸ್ಫೋಟಗೊಂಡು, ಲಾವಾರಸ ಹೊರಹಾಕುತ್ತಿರುವ ದೃಶ್ಯಗಳು ಎಂತವರನ್ನು ಒಮ್ಮೆ ಮೈ ಜುಮ್ ಅನ್ನಿಸುತ್ತಿದೆ. ಬೆಂಕಿಯ ಜ್ವಾಲೆಯಿಂದಾಗಿ ಆಗಸದಲ್ಲಿ ಕಡುಗೆಂಪು ಬಣ್ಣ ಆವರಿಸಿದೆ. ಬೆಂಕಿ ಹಾಗೂ ಮಂಜುಗಡ್ಡೆಯಿಂದ ಆವರಿಸ್ಪಟ್ಟಿರುವ ಐಲ್ಯಾಂಡ್‌ನಲ್ಲಿ ಯುರೋಪಿನ ಅತಿದೊಡ್ಡ ಮತ್ತು ಸಕ್ರಿಯ ಜ್ವಾಲಾಮುಖಿ ಸ್ಥಿತಗೊಂಡಿದೆ.
ಮಧ್ಯಯುಗದಿಂದಲೂ ಭೂಮಿಯ ಮೇಲ್ಮೈಗೆ ಮೂರನೇ ಒಂದರಷ್ಟು ಲಾವಾರಸ ಐಲ್ಯಾಂಡ್‌ನಿಂದ ಹರಿಯುತ್ತಿದೆ. (ಚಿತ್ರ ಕೃಪೆ: ಎಎಫ್‌ಪಿ)
ADVERTISEMENT
ಐಲ್ಯಾಂಡ್ ಕರಾವಳಿ ಪಡೆಯು ಹೆಲಿಕಾಪ್ಟರ್ ಸಹಾಯದಿಂದ ಲಾವಾರಸ ಹೊರಚಿಮ್ಮುತ್ತಿರುವ ರೋಚಕ ದೃಶ್ಯಗಳನ್ನು ಸೆರೆಹಿಡಿದಿದೆ. (ಚಿತ್ರ ಕೃಪೆ: ಎಎಫ್‌ಪಿ)
ಯುರೇಷ್ಯಾ ಮತ್ತು ಉತ್ತರ ಅಮೆರಿಕದ ಟೆಕ್ಟೋನಿಕ್ ಪದರಗಳನ್ನು ಬೇರ್ಪಡಿಸುವ ಸಾಗರದ ತಳದಲ್ಲಿ ಬಿರುಕು ಬಿಟ್ಟ ಪರಿಣಾಮ ಐಲ್ಯಾಂಡ್‌ನಲ್ಲಿ ಪದೇ ಪದೇ ಜ್ವಾಲಾಮುಖಿ ಸ್ಫೋಟವಾಗುತ್ತಿದೆ. (ಚಿತ್ರ ಕೃಪೆ: ಎಎಫ್‌ಪಿ)
ಸದ್ಯ ಐಲ್ಯಾಂಡ್‌ನಲ್ಲಿ 32 ಸಕ್ರಿಯ ಜ್ವಾಲಾಮುಖಿಗಳಿವೆ. (ಚಿತ್ರ ಕೃಪೆ: ರಾಯಿಟರ್ಸ್)
ಐಲ್ಯಾಂಡ್‌ನ ಕೆಫ್ಲಾವಿಕ್ (Keflavik) ವಿಮಾನ ನಿಲ್ದಾಣ ಮತ್ತು ಸಣ್ಣ ಮೀನುಗಾರಿಕೆ ಬಂದರು ಕೆಲವೇ ಕಿಲೋಮೀಟರ್ ಅಂತರದಲ್ಲಿದೆ. (ಚಿತ್ರ ಕೃಪೆ: ರಾಯಿಟರ್ಸ್)
ಜ್ವಾಲಾಮುಖಿ ಸ್ಫೋಟದಿಂದ ಜನವಸತಿ ಕೇಂದ್ರಕ್ಕೆ ಯಾವುದೇ ಅಪಾಯವಿಲ್ಲ. ಸದ್ಯ ಆಗಸಕ್ಕೆ ಬೂದಿ ಹಾರಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. (ಚಿತ್ರ ಕೃಪೆ: ಎಎಫ್‌ಪಿ)
ಪೊಲೀಸರು ಮತ್ತು ಕರಾವಳಿ ಕಾವಲು ಪಡೆ ಅಧಿಕಾರಿಗಳು ತೀವ್ರ ನಿಗಾವಹಿಸಿದ್ದು, ಸಾರ್ವಜನಿಕರಿಗೆ ದೂರವಿರುವಂತೆ ಸೂಚಿಸಿದೆ. (ಚಿತ್ರ ಕೃಪೆ: ರಾಯಿಟರ್ಸ್)
ಮುನ್ನಚ್ಚೆರಿಕಾ ಕ್ರಮವಾಗಿ ವಿಮಾನ ನಿಲ್ದಾಣದ ಮುಖ್ಯ ರಸ್ತೆಯನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. (ಚಿತ್ರ ಕೃಪೆ: ಎಎಫ್‌ಪಿ)
ಐಲ್ಯಾಂಡ್‌ನಲ್ಲಿ ಈ ಹಿಂದೆಯೂ ಹಲವು ಬಾರಿ ಅಗ್ನಿಪರ್ವತ ಸ್ಫೋಟ ಸಂಭವಿಸಿದೆ. (ಚಿತ್ರ ಕೃಪೆ: ಎಎಫ್‌ಪಿ)