ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Photos| ಚೀನಾದಲ್ಲಿ ಟ್ರಂಪ್ ಮೇಣದ ಪ್ರತಿಮೆ ತಯಾರಕರಿಗೆ ಸಂಕಷ್ಟ

ಶಾಂಘೈ(ರಾಯಿಟರ್ಸ್‌): ಅಮೆರಿಕದಲ್ಲಿ ನಡೆಯುತ್ತಿರುವ ಅಧ್ಯಕ್ಷೀಯ ಚುನಾವಣೆಗಳು ಚೀನಾದ ಮೇಣದ ಪ್ರತಿಮೆ ತಯಾರಿಕಾ ಉದ್ಯಮಕ್ಕೆ ಹೆಚ್ಚಿನ ಆದಾಯ ತಂದು ಕೊಡುವ ನಿರೀಕ್ಷೆಗಳಿದ್ದವು. ಡೊನಾಲ್ಡ್‌ ಟ್ರಂಪ್‌ ಅವರ ಪ್ರತಿಮೆಗಳಿಗಾಗಿ ಭಾರಿ ಭೇಡಿಕೆ ಬರುವ ಸಾಧ್ಯತೆಗಳಿದ್ದವು.ಆದರೆ, ಕೊರೊನಾ ವೈರಸ್‌ನ ಆಕ್ರಮಣವು ಉದ್ಯಮದ ಎಲ್ಲ ಲೆಕ್ಕಾಚಾರಗಳನ್ನು ತಲೆಕೆಳಗು ಮಾಡಿದೆ.‘ಕೋವಿಡ್‌ನಿಂದಾಗಿ ನಮಗೆ ಡೊನಾಲ್ಡ್‌ ಟ್ರಂಪ್‌ ಅವರ ಪ್ರತಿಮೆಗಳನ್ನು ಕೋರಿ ಹೊಸ ಆದೇಶಗಳೇ ಬರುತ್ತಿಲ್ಲ. ಅಮೆರಿಕ ಸೇರಿದಂತೆ ವಿದೇಶಿ ಪ್ರಯಾಣ ಸ್ಥಗಿತಕೊಂಡಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಭೀಕರವಾಗಿಸಿದೆ. ನಾವು ಈಗ ಜೊ ಬೈಡೆನ್ ಅವರ ಪ್ರತಿಕೃತಿಗಳನ್ನು ತಯಾರಿಸುವುದನ್ನೇ ನಿಲ್ಲಿಸಿದ್ದೇವೆ,’ ಎನ್ನುತ್ತಾರೆ ಶಾಂಘೈನ ‘ಮಾಯಿ ಆರ್ಟ್ಸ್‌’ನ ವ್ಯವಸ್ಥಾಪಕ ಝೆಂಗ್‌ ಶೆಂಗ್‌.ಶಾಂಘೈ ಹೊರ ವಲಯದಲ್ಲಿರುವ ‘ಮಾಯಿ ಆರ್ಟ್ಸ್‌’ 2012ರಲ್ಲಿ ಆರಂಭವಾಗಿದ್ದು, ಮೇಣದ ಆಕೃತಿಗಳನ್ನು ತಯಾರಿಸುವ ಮತ್ತು ಪೂರೈಕೆ ಮಾಡುವ ವ್ಯವಹಾರ ನಡೆಸುತ್ತಿದೆ. ಇಲ್ಲಿ ಜಗತ್ತಿನ ಹಲವು ನಾಯಕರ ಪ್ರತಿಮೆಗಳನ್ನು ತಯಾರಿಸಲಾಗುತ್ತದೆ.ಚಿತ್ರಗಳು: ರಾಯಿಟರ್ಸ್‌
Published : 25 ಆಗಸ್ಟ್ 2020, 9:24 IST
ಫಾಲೋ ಮಾಡಿ
Comments
Photos| ಚೀನಾದಲ್ಲಿ ಟ್ರಂಪ್ ಮೇಣದ ಪ್ರತಿಮೆ ತಯಾರಕರಿಗೆ ಸಂಕಷ್ಟ
ADVERTISEMENT
Photos| ಚೀನಾದಲ್ಲಿ ಟ್ರಂಪ್ ಮೇಣದ ಪ್ರತಿಮೆ ತಯಾರಕರಿಗೆ ಸಂಕಷ್ಟ
Photos| ಚೀನಾದಲ್ಲಿ ಟ್ರಂಪ್ ಮೇಣದ ಪ್ರತಿಮೆ ತಯಾರಕರಿಗೆ ಸಂಕಷ್ಟ
Photos| ಚೀನಾದಲ್ಲಿ ಟ್ರಂಪ್ ಮೇಣದ ಪ್ರತಿಮೆ ತಯಾರಕರಿಗೆ ಸಂಕಷ್ಟ
Photos| ಚೀನಾದಲ್ಲಿ ಟ್ರಂಪ್ ಮೇಣದ ಪ್ರತಿಮೆ ತಯಾರಕರಿಗೆ ಸಂಕಷ್ಟ
Photos| ಚೀನಾದಲ್ಲಿ ಟ್ರಂಪ್ ಮೇಣದ ಪ್ರತಿಮೆ ತಯಾರಕರಿಗೆ ಸಂಕಷ್ಟ
Photos| ಚೀನಾದಲ್ಲಿ ಟ್ರಂಪ್ ಮೇಣದ ಪ್ರತಿಮೆ ತಯಾರಕರಿಗೆ ಸಂಕಷ್ಟ
Photos| ಚೀನಾದಲ್ಲಿ ಟ್ರಂಪ್ ಮೇಣದ ಪ್ರತಿಮೆ ತಯಾರಕರಿಗೆ ಸಂಕಷ್ಟ
Photos| ಚೀನಾದಲ್ಲಿ ಟ್ರಂಪ್ ಮೇಣದ ಪ್ರತಿಮೆ ತಯಾರಕರಿಗೆ ಸಂಕಷ್ಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT