ಕಝನ್ (ರಷ್ಯಾ): ಭಾರತ ಮಾತುಕತೆ ಮತ್ತು ರಾಜತಾಂತ್ರಿಕತೆಯನ್ನು ಬೆಂಬಲಿಸುತ್ತದೆಯೇ ಹೊರತು ಯುದ್ಧವನ್ನಲ್ಲ ಎಂದು ಪ್ರಧಾನಿ ನರೇಂದ್ರ ಮೋದಿಯವರು ಬ್ರಿಕ್ಸ್ ಸಮಾವೇಶದಲ್ಲಿ ಬುಧಾವರ ಪ್ರತಿಪಾದಿಸಿದ್ದಾರೆ.

ಆ ಮೂಲಕ ರಷ್ಯಾ–ಉಕ್ರೇನ್ ಸಂಘರ್ಷವನ್ನು ಶಾಂತಿ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು ಎನ್ನುವ ಕರೆ ನೀಡಿದ್ದಾರೆ.
.ಎಂ.ಎಸ್. ಸ್ವಾಮಿನಾಥನ್ ಕೊಡುಗೆ ಅಚ್ಚಳಿಯದೆ ಉಳಿಯಲಿದೆ: ಪ್ರಧಾನಿ ಮೋದಿ.
ತಮ್ಮ ಭಾಷಣದಲ್ಲಿ ಯುದ್ಧ, ಆರ್ಥಿಕ ಅನಿಶ್ಚಿತತೆ, ಹವಾಮಾನ ಬದಲಾವಣೆ ಹಾಗೂ ಉಗ್ರವಾದದ ಸವಾಲುಗಳ ಬಗ್ಗೆ ಮಾತನಾಡಿದ ಅವರು, ಜಗತ್ತನ್ನು ಸರಿಯಾದ ದಾರಿಯಲ್ಲಿ ಕೊಂಡೊಯ್ಯಲು ಬ್ರಿಕ್ಸ್ ಸಕಾರಾತ್ಮಕ ಪಾತ್ರವನ್ನು ವಹಿಸಬಹುದು ಎಂದು ಹೇಳಿದ್ದಾರೆ.

‘ಕೋವಿಡ್ ಎನ್ನುವ ಸವಾಲನ್ನು ಒಟ್ಟುಗೂಡಿ ಎದುರಿಸಿ ಅದರಿಂದ ಮುಕ್ತಿ ಪಡೆದ ಹಾಗೆ, ಭವಿಷ್ಯದ ಪೀಳಿಗೆಗೆ ಸುರಕ್ಷಿತ, ಸದೃಢ ಮತ್ತು ಸಮೃದ್ಧ ಭವಿಷ್ಯವನ್ನು ಖಚಿತಪಡಿಸಿಕೊಳ್ಳಲು, ಹೊಸ ಅವಕಾಶಗಳನ್ನು ಸೃಷ್ಟಿಸಲು ನಾವು ಸಮರ್ಥರಾಗಿದ್ದೇವೆ ಎಂದು ಮೋದಿ ಹೇಳಿದರು.
.ಆಳ-ಅಗಲ | ಬ್ರಿಕ್ಸ್ ಶೃಂಗಸಭೆ: ಕದನ ಕುತೂಹಲ.
ಭಯೋತ್ಪಾದನೆಯನ್ನು ಎದುರಿಸಲು ಜಾಗತಿಕ ಸಂಘಟಿತ ಪ್ರಯತ್ನ ಬೇಕು ಎಂದು ಪ್ರತಿಪಾದಿಸಿದ ಅವರು, ಉಗ್ರವಾದದ ವಿರುದ್ಧ ಹೋರಾಡುವಲ್ಲಿ ಯಾವುದೇ ಇಬ್ಬಗೆ ನೀತಿ ಇರಬಾರದು ಎಂದು ಹೇಳಿದ್ದಾರೆ.

‘ಭಯೋತ್ಪಾದನೆ ಹಾಗೂ ಭಯೋತ್ಪಾದಕ ಚುಟುವಟಿಕೆಗಳಿಗೆ ಹಣಕಾಸು ನೆರವು ನೀಡುವುದನ್ನು ನಿಗ್ರಹಿಸಲು ನಾವೆಲ್ಲಾ ಸಮಾನ ಮನಸ್ಕರಾಗಬೇಕು. ಈ ಗಂಭೀರ ವಿಷಯದ ಬಗ್ಗೆ ಇಬ್ಬಗೆ ನೀತಿ ಇರಕೂಡದು’ ಎಂದು ಹೇಳಿದ್ದಾರೆ.
.ಸ್ಪರ್ಧಾವಾಣಿ: ದಶರಾಷ್ಟ್ರಗಳ ಒಕ್ಕೂಟ ‘ಬ್ರಿಕ್ಸ್’ ಬಗ್ಗೆ ಇಲ್ಲಿದೆ ಮಾಹಿತಿ.
ಬ್ರಿಕ್ಸ್ ಒಕ್ಕೂಟಕ್ಕೆ ಹೊಸ ಸದಸ್ಯರನ್ನು ಸ್ವಾಗತಿಸಲು ಭಾರತ ಸಜ್ಜಾಗಿದೆ. ಈ ಬಗ್ಗೆ ಒಮ್ಮತದ ನಿರ್ಧಾರ ತೆಗೆದುಕೊಳ್ಳಬೇಕು. ಬ್ರಿಕ್ಸ್ ಸಂಸ್ಥಾಪಕ ದೇಶಗಳ ಅಭಿಪ್ರಾಯಗಳನ್ನು ಗೌರವಿಸಬೇಕು’ ಎಂದು ಪ್ರತಿಪಾದಿಸಿದ್ದಾರೆ.
.ಚೀನಾ: ಬ್ರಿಕ್ಸ್ ವ್ಯಾಪಾರದಲ್ಲಿ ಹೆಚ್ಚಳ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.