ದುಬೈ/ ಮಸ್ಕತ್: ಒಮನ್ ರಾಜಧಾನಿ ಮಸ್ಕತ್ನಲ್ಲಿರುವ ಶಿಯಾ ಮುಸ್ಲಿಂ ಮಸೀದಿ ಬಳಿ ಸೋಮವಾರ ರಾತ್ರಿ ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ಒಬ್ಬ ಭಾರತೀಯ ಸೇರಿ ಆರು ಮಂದಿ ಮೃತಪಟ್ಟಿದ್ದಾರೆ.

ಈ ಘಟನೆಯಲ್ಲಿ ಒಬ್ಬ ಪೊಲೀಸ್ ಹಾಗೂ ಪಾಕಿಸ್ತಾನದ ನಾಲ್ವರು ಮೃತಪಟ್ಟಿದ್ದು, 28 ಮಂದಿ ಗಾಯಗೊಂಡಿದ್ದಾರೆ. ಈ ವೇಳೆ ಪ್ರತಿದಾಳಿ ನಡೆಸಿದ ಭದ್ರತಾ ಪಡೆಗಳು ಮೂವರು ಉಗ್ರರನ್ನು ಸದೆಬಡೆದಿವೆ ಎಂದು ತಿಳಿದುಬಂದಿದೆ.

ಈ ಕುರಿತು ಪ್ರತಿಕ್ರಿಯಿಸಿದ ವಿದೇಶಾಂಗ ಸಚಿವಾಲಯವು, ‘ಉಗ್ರರ ದಾಳಿಯಲ್ಲಿ ಭಾರತದ ಒಬ್ಬ ಪ್ರಜೆ ಮೃತಪಟ್ಟಿದ್ದು, ಮತ್ತೊಬ್ಬರು ಗಾಯಗೊಂಡಿದ್ದಾರೆ. ಮೃತನ ಕುಟುಂಬಕ್ಕೆ ಅಗತ್ಯವಿರುವ ಎಲ್ಲ ನೆರವು ನೀಡಲಾಗುವುದು’ ಎಂದು ತಿಳಿಸಿದೆ.

ಪಾಕಿಸ್ತಾನ, ಇರಾಕ್, ಅಫ್ಗಾನಿಸ್ತಾನ ಸೇರಿದಂತೆ ಇತರ ದೇಶಗಳಲ್ಲಿರುವ ಶಿಯಾ ಮಸೀದಿಗಳು, ಸಮಾವೇಶ, ಮೆರವಣಿಗೆ ಮತ್ತು ಭಕ್ತರನ್ನು ಗುರಿಯಾಗಿಸಿ ಐಎಸ್ ಉಗ್ರರು ನಿರಂತರವಾಗಿ ದಾಳಿ ನಡೆಸುತ್ತಿದ್ದಾರೆ. ಶಿಯಾ ಸಮುದಾಯ ಅಲ್ಪಸಂಖ್ಯಾತರಾಗಿರುವ ಒಮನ್ನಲ್ಲಿ ಐಎಸ್ ಉಗ್ರರು ಇದೇ ಮೊದಲ ಬಾರಿಗೆ ದಾಳಿ ಎಸಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.