ತನಾ ದತಾರ್, ಇಂಡೊನೇಷ್ಯಾ: ಇಂಡೊನೇಷ್ಯಾದ ಸುಮಾರ್ತಾ ದ್ವೀಪ ಪ್ರದೇಶದಲ್ಲಿ ಕಳೆದ ವಾರಾಂತ್ಯ ಕಂಡುಬಂದ ದಿಢೀರ್ ಪ್ರವಾಹದಿಂದ ತೀವ್ರ ಹಾನಿಯಾಗಿದ್ದು, ಕನಿಷ್ಠ 52 ಮಂದಿ ಮೃತಪಟ್ಟಿದ್ದಾರೆ.

ಧಾರಾಕಾರ ಮಳೆಯಿಂದಾಗಿ ಹಲವೆಡೆ ಭೂಕುಸಿತ ಸಂಭವಿಸಿದ್ದು, ಹಲವು ನದಿಗಳು ಉಕ್ಕಿ ಹರಿದಿವೆ. ಸುಮಾತ್ರಾದ ದಕ್ಷಿಣ ಭಾಗದ ನಾಲ್ಕು ಜಿಲ್ಲೆಗಳಲ್ಲಿ ತೀವ್ರ ಹಾನಿ ಸಂಭವಿಸಿದೆ.

ಹಲವು ಮನೆಗಳು ಕೊಚ್ಚಿಹೋಗಿವೆ. ಹಲವು ಕಟ್ಟಡಗಳು ಜಲಾವೃತವಾಗಿವೆ. ಸುಮಾರು 3,300 ಜನರು ಅತಂತ್ರರಾಗಿದ್ದು, ನಿರಾಶ್ರಿತ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ ಎಂದು ರಾಷ್ಟ್ರೀಯ ಪ್ರಾಕೃತಿಕ ವಿಕೋಪ ನಿರ್ವಹಣಾಸಂಸ್ಥೆಯ ವಕ್ತಾರ ಅಬ್ದುಲ್ ಮುಹಾರಿ ತಿಳಿಸಿದರು.

ಶೋಧ ಕಾರ್ಯದಲ್ಲಿ ತೊಡಗಿರುವ ಸಿಬ್ಬಂದಿ ಸುಮಾರು 52 ಶವ ಪತ್ತೆಹಚ್ಚಿದ್ದಾರೆ. ಅಗಂ, ತನಾಹ್ ದಾತಾರ್ ಜಿಲ್ಲೆಗಳಲ್ಲಿ ಹೆಚಚಿನ ಹಾನಿಯಾಗಿದೆ. 20 ಮಂದಿ ನಾಪತ್ತೆಯಾಗಿದ್ದು, ಅವರಿಗಾಗಿ ಶೋಧ ಮುಂದುವರಿದಿದೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.