ಕಂದಹಾರ್: ಕಂದಹಾರ್ನ ಶಿಯಾ ಮಸೀದಿಯಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿಯ ಹೊಣೆಯನ್ನು ಉಗ್ರಗಾಮಿ ಸಂಘಟನೆ ಐಸಿಸ್ನ ಖುರಾಸನ್ ಪಡೆ (ಐಎಸ್–ಕೆ) ಹೊತ್ತುಕೊಂಡಿದೆ.

ಶುಕ್ರವಾರ ಕಂದಹಾರ್ನ ಶಿಯಾ ಮಸೀದಿಯಲ್ಲಿ ನಡೆದ ದಾಳಿಯಲ್ಲಿ 41 ಮಂದಿ ಹತರಾಗಿದ್ದರು. ಹೆಚ್ಚಿನ ಸಂಖ್ಯೆಯ ಜನರಿಗೆ ಗಾಯಗಳಾಗಿದ್ದವು.

ಪ್ರಾರ್ಥನೆ ನಡೆಯುವ ವೇಳೆಮಸೀದಿಯ ಎರಡು ಕಡೆಗಳಲ್ಲಿ ನಡೆದ ಪ್ರತ್ಯೇಕ ಸ್ಫೋಟವನ್ನು ನಡೆಸಿದ್ದು ನಾವೇ ಎಂದು ಐಎಸ್–ಕೆ ಹೇಳಿಕೊಂಡಿದೆ. ಈ ಬಗ್ಗೆ ‘ಟೆಲಿಗ್ರಾಂ’ ಚಾನೆಲ್ಗಳಲ್ಲಿ ಹೇಳಿಕೆ ಬಿಡುಗಡೆ ಮಾಡಿದೆ.

‘ಮಸೀದಿಯ ಹಜಾರದ ಹಾದಿಯಲ್ಲಿ ಮೊದಲ ಆತ್ಮಾಹುತಿ ಬಾಂಬರ್ನಿಂದ ಸ್ಫೋಟ ಸಂಭವಿಸಿತ್ತು. ಎರಡನೇ ಆತ್ಮಾಹುತಿ ಬಾಂಬರ್ ಮಸೀದಿಯ ಕೇಂದ್ರ ಭಾಗದಲ್ಲಿ ಸ್ಫೋಟ ಉಂಟು ಮಾಡಿದ್ದ,‘ ಎಂದು ಸಂಘಟನೆ ಹೇಳಿದೆ.

ಇದಕ್ಕೂ ಮೊದಲು ಅ.8ರಂದು ಕುಂದುಜ್ ಎಂಬಲ್ಲಿನ ಶಿಯಾ ಮಸೀದಿ ಮೇಲೆ ದಾಳಿ ನಡೆದಿತ್ತು. ಅದರಲ್ಲಿ ನೂರಾರು ನಾಗರಿಕರು ಹತರಾಗಿದ್ದರು. ಇದರ ಹೊಣೆಯನ್ನೂ ಐಎಸ್ ಉಗ್ರರು ಹೊತ್ತುಕೊಂಡಿದ್ದರು. ಈ ಮಧ್ಯೆ,ಅಫ್ಗಾನಿಸ್ತಾನದ ‘ಆದ್ಯಾತ್ಮ ಕೇಂದ್ರ’ ಎಂದೇ ಕರೆಸಿಕೊಳ್ಳುವ ಕಂದಹಾರ್ನಲ್ಲಿ ದಾಳಿ ಮಾಡಲಾಗಿದೆ.

ಅಫ್ಗಾನಿಸ್ತಾನವನ್ನು ತಾಲಿಬಾನ್ ವಶಕ್ಕೆ ಪಡೆದಾಗಿನಿಂದ ಅಲ್ಲಿ, ಐಎಸ್–ಕೆ ಸಂಘಟನೆ ಪ್ರಬಲವಾಗುತ್ತಿದೆ. ದಾಳಿ, ಸ್ಫೋಟಗಳ ಮೂಲಕ ತನ್ನ ಅಸ್ತಿತ್ವವನ್ನು ಸಾಬೀತು ಮಾಡುತ್ತಾ ಸಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.