ಗಾಜಾ ಪಟ್ಟಿ: ಉತ್ತರ ಗಾಜಾದಲ್ಲಿ ನಡೆಸುತ್ತಿರುವ ದಾಳಿಯನ್ನು ತಾತ್ಕಾಲಿಕ ವಿರಾಮ ನೀಡುವುದಾಗಿ ಇಸ್ರೇಲ್ ಹೇಳಿದೆ. ಆದರೆ ಕದನ ವಿರಾಮ ಇಲ್ಲ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.

ಒಂದು ವೇಳೆ ಕದನ ವಿರಾಮ ಘೋಷಿಸಿದರೆ ಹಮಾಸ್‌ಗೆ ಶರಣಾದಂತೆ ಎಂದು ಅವರು ಪ್ರತಿಪಾದಿಸಿದ್ದಾರೆ.
.Israel Hamas War | ಗಾಜಾ ಪಟ್ಟಿಯನ್ನು ಇಬ್ಭಾಗ ಮಾಡಿದ್ದೇವೆ: ಇಸ್ರೇಲ್ ಸೇನೆ.
‘ಹಮಾಸ್‌ನೊಂದಿಗೆ ಕದನ ವಿರಾಮ ಎಂದರೆ, ಹಮಾಸ್‌ಗೆ ಶರಣಾದಂತೆ, ಉಗ್ರವಾದಕ್ಕೆ ಶರಣಾದಂತೆ. ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡದೆ ಕದನ ವಿರಾಮ ಇಲ್ಲ’ ಎಂದು ನೆತನ್ಯಾಹು ಹೇಳಿದ್ದಾರೆ.

ಅಕ್ಟೋಬರ್ 7ರಂದು ಹಮಾಸ್ ಮಾಡಿದ ದಾಳಿಯ ಬಳಿಕ, ಇಸ್ರೇಲ್ ಪಡೆಗಳು ಅತ್ಯುತ್ತಮವಾಗಿ ದಾಳಿ ಸಂಘಟಿಸಿವೆ ಎಂದು ಅವರು ಶ್ಲಾಘಿಸಿದ್ದಾರೆ. ಅಲ್ಲದೆ ಗಾಜಾ ಪಟ್ಟಿಯನ್ನು ವಶಪಡಿಸಿಕೊಳ್ಳುವ ಯಾವುದೇ ಉದ್ದೇಶ ಇಲ್ಲ ಎಂದು ಅವರು ಹೇಳಿದ್ದಾರೆ.
.ಸೀಮೋಲ್ಲಂಘನ: ಇಸ್ರೇಲ್– ಹಮಾಸ್ ಸಮರ, ಮುಂದೆ?.
‘ಗಾಜಾವನ್ನು ಆಳಲು ಮಾಡಲು ನಾವು ಬಯಸುವುದಿಲ್ಲ. ನಾವು ಅದನ್ನು ವಶಪಡಿಸಿಕೊಳ್ಳುವುದಿಲ್ಲ. ನಾವು ನಮಗೆ ಮತ್ತು ಗಾಜಾಕ್ಕೆ ಉತ್ತಮ ಭವಿಷ್ಯ ನೀಡಲು ಯತ್ನಿಸುತ್ತೇವೆ’ ಎಂದು ಹೇಳಿದ್ದಾರೆ.

ಇಸ್ರೇಲ್ ದಾಳಿಯಿಂದಾಗಿ ಗಾಜಾದಲ್ಲಿ 4 ಸಾವಿರಕ್ಕೂ ಅಧಿಕ ಮಕ್ಕಳು ಸೇರಿ 10 ಸಾವಿರಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದಾರೆ.

ದಾಳಿಯಿಂದಾಗಿ ನವೆಂಬರ್ 4ರ ಬಳಿಕ ಸುಮಾರು 70 ಸಾವಿರ ಮಂದಿ ದಕ್ಷಿಣ ಭಾಗಕ್ಕೆ ಗುಳೆ ಹೋಗಿದ್ದಾರೆ. ಈ ಪೈಕಿ ಬಹು ಮಂದಿ ನಡೆದುಕೊಂಡೇ ಊರು ತೊರೆದಿದ್ದಾರೆ. ಆಂತರಿಕವಾಗಿ 16 ಲಕ್ಷ ಮಂದಿ ಸ್ಥಳಾಂತರಗೊಂಡಿದ್ದಾರೆ. ಇನ್ನೂ ಸಾವಿರಾರು ಮಂದಿ ಯುದ್ಧಭೂಮಿಯಲ್ಲಿ ಉಳಿದುಕೊಂಡಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿದೆ.
.ಎಚ್.ಡಿ.ಕುಮಾರಸ್ವಾಮಿ ಭೇಟಿಯಾದ ಇಸ್ರೇಲ್ ಕಾನ್ಸುಲೇಟ್ ಜನರಲ್ ಟಾಮಿ ಬೆನ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.