ಜೆರುಸಲೇಂ: (ಎಪಿ, ರಾಯಿಟರ್ಸ್): ಇಸ್ರೇಲ್ ಹಾಗೂ ಪ್ಯಾಲೆಸ್ಟೀನ್ ನಡುವಿನ ಸಂಘರ್ಷ ಯುದ್ಧದ ಸ್ವರೂಪವನ್ನು ಪಡೆದಿದ್ದು, ಎರಡೂ ಕಡೆಗಳಿಂದ ನಡೆದ ದಾಳಿ, ಪ್ರತಿದಾಳಿಯಲ್ಲಿ 398 ಜನ ಸಾವನ್ನಪ್ಪಿದ್ದಾರೆ.

ಪ್ಯಾಲೆಸ್ಟೀನ್ನ ಹಮಾಸ್ ಬಂಡುಕೋರರು ಶನಿವಾರ ನಸುಕಿನಲ್ಲಿ ಗಾಜಾ ಪಟ್ಟಿಯಿಂದ ಇಸ್ರೇಲ್ ಮೇಲೆ ನಡೆಸಿದ ದಿಢೀರ್ ರಾಕೆಟ್ ದಾಳಿಗೆ ಕನಿಷ್ಠ 200 ಮಂದಿ ಸಾವಿಗೀಡಾದರೆ, ಇಸ್ರೇಲ್ ನಡೆಸಿದ ಪ್ರತಿ ದಾಳಿಯಲ್ಲಿ ಗಾಜಾ ಪಟ್ಟಿಯಲ್ಲಿನ ಕನಿಷ್ಠ 198 ಜನರ ಹತ್ಯೆಯಾಗಿದೆ. ಎರಡೂ ಕಡೆಗಳಲ್ಲಿ ಸಾವಿರಾರು ಮಂದಿ ಗಾಯಗೊಂಡಿದ್ದಾರೆ.

ಇಸ್ರೇಲ್ನ ಕೆಲವು ಸೈನಿಕರು ಮತ್ತು ನಾಗರಿಕರನ್ನು ಹಮಾಸ್ ಬಂಡುಕೋರರು ಗಾಜಾದಲ್ಲಿ ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದಾರೆ. ಇಸ್ರೇಲ್ನಲ್ಲಿ ಶನಿವಾರ ಯೆಹೂದಿಗಳ ‘ಯಾಮ್ ಕಿಪ್ಪುರ್’ ಹಬ್ಬಕ್ಕೆ ರಜೆ ಇತ್ತು. ಈ ಸಂದರ್ಭದಲ್ಲೇ ಭೂ, ಜಲ ಮತ್ತು ವಾಯು ಮಾರ್ಗದ ಮೂಲಕ ಬಂಡುಕೋರರು ದಾಳಿ ಎಸಗಿದ್ದಾರೆ. ದೇಶದ ದಕ್ಷಿಣ ಭಾಗದ ಮೂಲಕ ಒಳ ನುಸುಳಿದ್ದಾರೆ. ಅನೇಕ ಸೈನಿಕರು ಮತ್ತು ಜನರನ್ನು ವಶಕ್ಕೆ ಪಡೆದು ಗಾಜಾ ಪಟ್ಟಿಯತ್ತ ಕರೆದೊಯ್ದಿದ್ದಾರೆ.

‘ಪ್ಯಾಲೆಸ್ಟೀನಿಯನ್ನರನ್ನು ಜೈಲಿನಿಂದ ಬಿಡುಗಡೆ ಮಾಡುವಂತೆ ಇಸ್ರೇಲ್ ಅನ್ನು ಒತ್ತಾಯಿಸಲು ಇಸ್ರೇಲ್ನ ಹಿರಿಯಅಧಿಕಾರಿಗಳು ಸೇರಿ ಅನೇಕರನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದೇವೆ’ ಎಂದು ಹಮಾಸ್ನ ಉಪ ಮುಖ್ಯಸ್ಥ ಸಲೇಹ್ ಅಲ್ ಅರೌರಿ ‘ಅಲ್ ಜಝೀರಾ’ ಸುದ್ದಿ ವಾಹಿನಿಗೆ ತಿಳಿಸಿದ್ದಾರೆ.

‘ದೇಶವು ಯುದ್ಧ ಎದುರಿಸುತ್ತಿದೆ’ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಘೋಷಿಸಿದ್ದು, ವೈರಿಗಳು ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ಗುಡುಗಿದ್ದಾರೆ.

ಇಸ್ರೇಲ್ನತ್ತ 5000 ರಾಕೆಟ್ಗಳನ್ನು ಉಡಾಯಿಸಲಾಗಿದೆ ಎಂದು ಗಾಜಾ ಪಟ್ಟಿ ಮೇಲೆ ನಿಯಂತ್ರಣ ಹೊಂದಿರುವ ಇಸ್ಲಾಮಿಕ್ ಗುಂಪು ಹಮಾಸ್ ಹೇಳಿಕೊಂಡಿದೆ. ದಾಳಿಯನ್ನು ‘ಆಪರೇಷನ್ ಅಲ್ – ಅಕ್ಸಾ ಫ್ಲಡ್’ ಎಂದು ಕರೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.