ಟೋಕಿಯೊ: ಫುಕುಶಿಮಾ ಅಣು ಸ್ಥಾವರ ದುರಂತ ಕುರಿತು ಹೊಸ ತನಿಖೆ ನಡೆಸುವುದಾಗಿ ಜಪಾನ್ ಪರಮಾಣು ನಿಯಂತ್ರಣ ಪ್ರಾಧಿಕಾರ (ಎನ್‌ಆರ್‌ಎ) ತಿಳಿಸಿದೆ.

ಟೋಕಿಯೊ ಎಲೆಕ್ಟ್ರಿಕ್ ಪವರ್ ನಡೆಸುತ್ತಿರುವ ಪರಮಾಣು ವಿದ್ಯುತ್ ಸ್ಥಾವರದಲ್ಲಿನ ಮೂರು ರಿಯಾಕ್ಟರ್ 2011ರಲ್ಲಿ ಸಂಭವಿಸಿದ್ದ ಭೂಕಂಪ ಮತ್ತು ಸುನಾಮಿಯಿಂದಾಗಿ ಕರಗಿದ್ದವು. ಆಗ ದೊಡ್ಡ ಪ್ರಮಾಣದಲ್ಲಿ ವಿಕಿರಣ ಸೋರಿಕೆಯಾಗಿತ್ತು. ಮುನ್ನೆಚ್ಚರಿಕಾ ಕ್ರಮವಾಗಿ 1.60 ಲಕ್ಷ ಜನರನ್ನು ಅಲ್ಲಿಂದ ಸ್ಥಳಾಂತರಿಸಲಾಗಿತ್ತು. ಅಲ್ಲಿನ
ರಿಯಾಕ್ಟರ್ ಕಟ್ಟಡಗಳಲ್ಲಿ ವಿಕಿರಣಗಳಮಟ್ಟ ಕ್ರಮೇಣ ಇಳಿಕೆಯಾಗಿದ್ದು, ಸರಣಿತನಿಖೆ ನಡೆಸುವುದಾಗಿ ಪ್ರಾಧಿಕಾರ ಹೇಳಿದೆ. ತನಿಖೆಗೆ ಸಹಕಾರ ನೀಡುವುದಾಗಿ ಟೋಕಿಯೊ ಎಲೆಕ್ಟ್ರಿಕ್ ಪವರ್ ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.