ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನೇಪಾಳದ ನೂತನ ಪ್ರಧಾನಿಯಾಗಿ ಕೆ.ಪಿ ಶರ್ಮಾ ಓಲಿ: ನಾಲ್ಕನೇ ಬಾರಿಗೆ ಪಟ್ಟ

Published 14 ಜುಲೈ 2024, 13:27 IST
Last Updated 14 ಜುಲೈ 2024, 13:27 IST
ಅಕ್ಷರ ಗಾತ್ರ

ಕಠ್ಮಂಡು: ಸಿಪಿಎನ್‌–ಯುಎಮ್‌ಎಲ್ ಪಕ್ಷದ ಅಧ್ಯಕ್ಷ, ಚೀನಾ ಪರ ನಾಯಕ ಕೆ.ಪಿ ಶರ್ಮಾ ಓಲಿ (72) ಅವರನ್ನು ನೇಪಾಳದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ದೇಶದಲ್ಲಿ ರಾಜಕೀಯ ಸ್ಥಿರತೆ ಕಾಪಾಡುವ ಜವಾಬ್ದಾರಿ ಅವರ ಮೇಲಿದೆ. ನಾಲ್ಕನೇ ಬಾರಿಗೆ ಅವರು ‍ಪ್ರಧಾನಿಯಾಗಿದ್ದಾರೆ.

ಶುಕ್ರವಾರ ನಡೆದ ವಿಶ್ವಾಸಮತ ಯಾಚನೆಯಲ್ಲಿ ಪುಷ್ಪ ಕಮಲ್ ದಹಲ್ ಪ್ರಚಂಡ ಅವರು, ಬಹುಮತ ಸಾಬೀತು ಪಡಿಸಲು ವಿಫಲರಾಗಿ, ‍‍ಪ್ರಧಾನಿ ಪಟ್ಟ ಕಳೆದುಕೊಂಡಿದ್ದರು. ಹೀಗಾಗಿ ಹೊಸ ಸರ್ಕಾರ ರಚನೆಯ ಪ್ರಕ್ರಿಯೆಗಳು ಆರಂಭವಾಗಿದ್ದವು.

ಓಲಿ ಅವರನ್ನು ನೂತನ ಪ್ರಧಾನಿಯನ್ನಾಗಿ ನೇಮಕ ಮಾಡಲಾಗಿದೆ ಎಂದು ರಾಷ್ಟ್ರಪತಿ ರಾಮ್ ಚಂದ್ರ ಪೌಡೆಲ್ ಅವರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

ಸಂಸತ್‌ನಲ್ಲಿ ಅತಿ ದೊಡ್ಡ ಪಕ್ಷವಾಗಿರುವ ನೇಪಾಳಿ ಕಾಂಗ್ರೆಸ್ ಬೆಂಬಲದೊಂದಿಗೆ ಅವರು ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.

ಓಲಿ ಅವರ ಪದಗ್ರಹಣ ಸಮಾರಂಭವು ಸೋಮವಾರ ಬೆಳಿಗ್ಗೆ 11 ಗಂಟೆಗೆ ರಾಷ್ಟ್ರಪತಿ ಭವನದಲ್ಲಿ ನಡೆಯಲಿದೆ.

ಪ್ರಚಂಡ ಅವರು ವಿಶ್ವಾಸಮತ ಸೋತ ಬೆನ್ನಲ್ಲೇ, ಓಲಿಯವರು 165 ಸಂಸದರ ಬೆಂಬಲ ಪತ್ರವನ್ನು ರಾಷ್ಟ್ರಪತಿಗೆ ಸಲ್ಲಿಸಿದ್ದರು. ತಮ್ಮ ಪಕ್ಷ ಕಮ್ಯುನಿಸ್ಟ್ ಪಾರ್ಟಿ ಆಫ್ ನೇಪಾಳ್–ಯುನಿಫೈಡ್ ಮಾರ್ಕಿಸ್ಟ್ ಲೆನಿನಿಸ್ಟ್‌ನ (CPN-UML) 77 ಸಂಸದರು ಹಾಗೂ ನೇಪಾಳಿ ಕಾಂಗ್ರೆಸ್‌ನ 88 ಸಂಸದರು ಬೆಂಬಲಿಸಿದ್ದಾರೆ.

ಈ ಹಿಂದೆ ಓಲಿಯವರು, 2015ರ ಅಕ್ಟೋಬರ್ 11 ರಿಂದ 2016ರ ಆಗಸ್ಟ್ 3, 2018 ಫೆಬ್ರವರಿ 5 ರಿಂದ 2021 ಜುಲೈ 13ರವರೆಗೆ ಹಾಗೂ 2021 ಮೇ 13 ರಿಂದ 2021 ಜುಲೈ 13ರ ವರೆಗೆ ಪ್ರಧಾನಿಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT