ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಷ್ಯಾದ ರಕ್ತಸಿಕ್ತ ನಾಯಕನ ಆಲಂಗಿಸಿದ ನರೇಂದ್ರ ಮೋದಿ: ಉಕ್ರೇನ್‌ ಅಧ್ಯಕ್ಷ ಟೀಕೆ

Published 9 ಜುಲೈ 2024, 7:08 IST
Last Updated 9 ಜುಲೈ 2024, 7:08 IST
ಅಕ್ಷರ ಗಾತ್ರ

ಕೀವ್: ‘ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವದ ನಾಯಕ, ವಿಶ್ವದ ಅತ್ಯಂತ ರಕ್ತಸಿಕ್ತ ಕ್ರಿಮಿನಲ್‌ನನ್ನು ಆಲಂಗಿಸಿದ್ದಾರೆ’ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝಲೆನ್‌ಸ್ಕಿ ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟಿನ್‌ ಭೇಟಿ ಕುರಿತು ಟೀಕಿಸಿದ್ದಾರೆ.

ಉಕ್ರೇನ್ ಅತಿದೊಡ್ಡ ಮಕ್ಕಳ ಆಸ್ಪತ್ರೆ ಮೇಲೆ ರಷ್ಯಾ ನಡೆಸಿರುವ ಕ್ಷಿಪಣಿ ದಾಳಿಯ ಬೆನ್ನಲ್ಲೇ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಝಲೆನ್‌ಸ್ಕಿ, ರಷ್ಯಾಕ್ಕೆ ಮೋದಿ ಭೇಟಿಯ ಕುರಿತು ಅಸಮಾಧಾನ ಹೊರಹಾಕಿದ್ದಾರೆ.

‘ರಷ್ಯಾದ ಕ್ರೂರ ಕ್ಷಿಪಣಿ ದಾಳಿಯ ಪರಿಣಾಮ ಉಕ್ರೇನ್‌ನಲ್ಲಿ 37 ಜನರು ಸಾವನ್ನಪ್ಪಿದ್ದಾರೆ. ಇದರಲ್ಲಿ ಮೂವರು ಮಕ್ಕಳು ಸೇರಿದ್ದಾರೆ. 13 ಮಕ್ಕಳು ಸೇರಿ 170 ಮಂದಿ ಗಾಯಗೊಂಡಿದ್ದಾರೆ. ಯುವ ಕ್ಯಾನ್ಸ್‌ರ್ ರೋಗಿಗಳನ್ನು ಗುರಿಯಾಗಿಸಿಕೊಂಡು ಮಕ್ಕಳ ಆಸ್ಪತ್ರೆ ಮೇಲೂ ರಷ್ಯಾ ದಾಳಿ ನಡೆಸಿದೆ. ಎಷ್ಟೋ ಮಕ್ಕಳು ಅವಶೇಷಗಳಡಿ ಹೂತು ಹೋಗಿದ್ದಾರೆ’ ಎಂದು ಹೇಳಿದ್ದಾರೆ.

‘ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ನಾಯಕರೊಬ್ಬರು ವಿಶ್ವದ ಅತ್ಯಂತ ರಕ್ತಸಿಕ್ತ ಕ್ರಿಮಿನಲ್‌ನನ್ನು ಆಲಂಗಿಸಿಕೊಳ್ಳುತ್ತಿರುವುದನ್ನು ನೋಡುವುದು ಶಾಂತಿಯ ಪ್ರಯತ್ನಗಳಿಗೆ ದೊಡ್ಡ ಹೊಡೆತವಾಗಿದೆ’ ಎಂದು ಪರೋಕ್ಷವಾಗಿ ಕುಟುಕಿದ್ದಾರೆ.

ಸೋಮವಾರ (ಜುಲೈ 8) ಉಕ್ರೇನ್ ಮೇಲೆ ರಷ್ಯಾ ಎರಡು ಪ್ರತ್ಯೇಕ ಕ್ಷಿಪಣಿ ದಾಳಿ ನಡೆಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT