ಜೆರುಸಲೇಂ: ಕೆಂಪು ಸಮುದ್ರ ಪ್ರದೇಶದಲ್ಲಿ ಸೋಮವಾರ ಸರಕು ಸಾಗಣೆ ಹಡಗೊಂದರ ಮೇಲೆ ಕ್ಷಿಪಣಿ ದಾಳಿ ನಡೆದಿದೆ. ಈ ದಾಳಿ ನಡೆಸಿದ್ದು ಹೂಥಿ ಬಂಡುಕೋರರು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.

ಯೆಮನ್‌ನ ಮೊಖಾ ಸಮುದ್ರ ತೀರದ ಸಮೀಪದಲ್ಲಿ ಈ ದಾಳಿ ನಡೆದಿದೆ ಎಂದು ಬ್ರಿಟನ್ ಮಿಲಿಟರಿಯ ಸಂಸ್ಥೆಯೊಂದು ತಿಳಿಸಿದೆ. ಹೆಚ್ಚಿನ ವಿವರ ಲಭ್ಯವಾಗಿಲ್ಲ. ಈ ಪ್ರದೇಶದಲ್ಲಿ ಹಡಗುಗಳು ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂದು ಅದು ಸೂಚಿಸಿದೆ.

ಮಾಲ್ಟಾ ದೇಶಕ್ಕೆ ಸೇರಿರುವ ಸರಕು ಸಾಗಣೆ ಹಡಗಿನ ಮೇಲೆ ಮೂರು ಕ್ಷಿಪಣಿಗಳಿಂದ ದಾಳಿ ನಡೆಸಲಾಗಿದೆ ಎಂದು ಖಾಸಗಿ ಭದ್ರತಾ ಸಂಸ್ಥೆ ಆ್ಯಂಬ್ರೆ ತಿಳಿಸಿದೆ. ಈ ಹಡಗು ಸೌದಿ ಅರೇಬಿಯಾದ ಜೆದ್ದಾ ಕಡೆ ತೆರಳುತ್ತಿತ್ತು.

ದಾಳಿ ನಡೆಸಿರುವುದನ್ನು ಹೂಥಿ ಬಂಡುಕೋರರ ಕಡೆಯವರು ತಕ್ಷಣಕ್ಕೆ ಒಪ್ಪಿಕೊಂಡಿಲ್ಲ. ಈ ಬಂಡುಕೋರರು ಯಾವುದೇ ದಾಳಿಯ ಬಗ್ಗೆ ಹೊಣೆ ಹೊರಲು ಕೆಲವು ಗಂಟೆಗಳು ಬೇಕಾಗುತ್ತವೆ.

ಇಸ್ರೇಲ್ ದೇಶವು ಗಾಜಾದಲ್ಲಿ ನಡೆಸುತ್ತಿರುವ ದಾಳಿಯನ್ನು ಕೊನೆಗೊಳಿಸಬೇಕು ಎಂಬ ಒತ್ತಡ ಹೇರುವ ಉದ್ದೇಶದಿಂದ ಕೆಂಪು ಸಮುದ್ರ ಮತ್ತು ಏಡನ್ ಕೊಲ್ಲಿ ಪ್ರದೇಶದಲ್ಲಿ ಸರಕು ಸಾಗಣೆ ಹಡಗುಗಳ ಮೇಲೆ ದಾಳಿ ನಡೆಸುತ್ತಿರುವುದಾಗಿ ಹೂಥಿ ಬಂಡುಕೋರರು ಹೇಳಿದ್ದಾರೆ.

ನವೆಂಬರ್ ನಂತರದಲ್ಲಿ ಹೂಥಿ ಬಂಡುಕೋರರು ಹಡಗುಗಳ ಮೇಲೆ 50ಕ್ಕೂ ಹೆಚ್ಚು ಬಾರಿ ದಾಳಿ ನಡೆಸಿದ್ದಾರೆ, ಒಂದು ಹಡಗನ್ನು ವಶಪಡಿಸಿಕೊಂಡಿದ್ದಾರೆ. ಇನ್ನೊಂದು ಹಡಗನ್ನು ಮುಳುಗಿಸಿದ್ದಾರೆ ಎಂದು ಅಮೆರಿಕ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.