ಲಂಡನ್: ಸಂಪಾದಕರಿಗೆ ಮಾಹಿತಿ ಇದ್ದರೂ ಮಿರರ್ ಸಮೂಹದ ಪತ್ರಕರ್ತರು ಕಾನೂನು ಬಾಹಿರವಾಗಿ ತಮ್ಮ ಫೋನ್ ಹ್ಯಾಕ್ ಮಾಡಿರುವುದಾಗಿ ಆರೋಪಿಸಿ ಪ್ರಿನ್ಸ್ ಹ್ಯಾರಿ ನ್ಯಾಯಾಲಯ ಮೆಟ್ಟಿಲೇರಿದ್ದಾರೆ. 130 ವರ್ಷಗಳಲ್ಲಿ ಬ್ರಿಟಿಷ್ ರಾಜಮನೆತನದ ಒಬ್ಬರು ನ್ಯಾಯಾಲಯದ ಮಟ್ಟಿಲೇರಿದ್ದು ಇದೇ ಮೊದಲು ಎಂದೆನ್ನಲಾಗಿದೆ.

ಕಿಂಗ್ ಚಾರ್ಲ್ಸ್ ಅವರ ಕಿರಿಯ ಪುತ್ರ ಪ್ರಿನ್ಸ್ ಹ್ಯಾರಿ, ಕಳೆದ ಜೂನ್ನಲ್ಲಿ ನ್ಯಾಯಾಲಯಕ್ಕೆ ತೆರಳಿ ಸಾಕ್ಷ್ಯ ನುಡಿದಿದ್ದರು. ಹ್ಯಾರಿ ಅವರು ಕದ್ದಾಲಿಕೆಗೆ ಗುರಿಯಾಗಿದ್ದಾರೆ ಎಂದು ಅಭಿಪ್ರಾಯಪಟ್ಟ ನ್ಯಾಯಾಧೀಶರು, ಸುದ್ದಿ ಸಂಸ್ಥೆಗೆ 1.4 ಲಕ್ಷ ಪೌಂಡ್ (₹1.47 ಕೋಟಿ) ದಂಡ ವಿಧಿಸಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವುದಾಗಿ ಲಂಡನ್ ಪೊಲೀಸರು ಹೇಳಿದ್ದಾರೆ.

ಪ್ರಿನ್ಸ್ ಹ್ಯಾರಿ ಅವರು 2020ರಲ್ಲಿ ರಾಜ ಕರ್ತವ್ಯಗಳಿಂದ ಕೆಳಗಿಳಿದು, ಮೇಘನ್ ಅವರನ್ನು ವರಿಸಿ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿದ್ದಾರೆ. ಪತ್ರಕರ್ತರ ವೇಷ ಧರಿಸಿರುವ ಅಪರಾಧಿಗಳು ಇದೀಗ ಸಂಪಾದಕರು ಹಾಗೂ ಇನ್ನಿತರ ಉನ್ನತ ಹುದ್ದೆಯಲ್ಲಿದ್ದಾರೆ. ಇವರು ಹಾಗೂ ಇವರ ಕೃತ್ಯಗಳನ್ನು ಬಯಲಿಗೆಳೆಯುವುದಾಗಿ ಹ್ಯಾರಿ ಹೇಳಿದ್ದರು.

ಜನಪ್ರಿಯ ಬ್ರಾಡ್ಕಾಸ್ಟರ್ಗಳಾದ ಪೀರ್ಸ್ ಮಾರ್ಗನ್ ಅವರು 1996ರಿಂದ 2004ರವರೆಗೆ ಡೈಲಿ ಮಿರರ್ನ ಸಂಪಾದಕರಾಗಿದ್ದರು. ಹ್ಯಾರಿ ಮತ್ತು ಮೇಘನ್ ಅವರನ್ನು ಟೀಕಿಸಿದವರಲ್ಲಿ ಪ್ರಮುಖರಾಗಿದ್ದರು. ಹ್ಯಾರಿ ಅವರ ದೂರಿನಲ್ಲಿ ಆರೋಪಿಸಿರುವಂತೆ ಕಾನೂನು ಬಾಹಿರ ವರ್ತನೆ ಸಂಪಾದಕರಲ್ಲಿ ಕೆಲವರಿಗೆ ಮಾಹಿತಿ ಇತ್ತು ಎಂದು ಮಾರ್ಗನ್ ಅವರನ್ನು ಗುರಿಯಾಗಿ ನ್ಯಾಯಾಲಯ ಹೇಳಿದೆ.

ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಮಾರ್ಗನ್, ಸಂಪಾದಕನಾದಾಗಿನಿಂದ ಫೋನ್ ಕದ್ದಾಲಿಕೆ ಕುರಿತು ಯಾವುದೇ ಮಾಹಿತಿ ನನಗೆ ಇರಲಿಲ್ಲ ಎಂದು ನ್ಯಾಯಾಲಯಕ್ಕೆ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.