ಸ್ಟಾಕ್‌ಹೋಮ್: ವಿಜ್ಞಾನಿಗಳಾದ ಸುಕುರೊ ಮನಬೆ, ಕ್ಲಾಸ್ ಹ್ಯಾಸಲ್‌ಮನ್ ಹಾಗೂ ಜಾರ್ಜಿಯೊ ಪಾರಿಸಿ ಅವರಿಗೆ ಜಂಟಿಯಾಗಿ 2021ನೇ ಸಾಲಿನ ಭೌತವಿಜ್ಞಾನ ನೊಬೆಲ್ ಪ್ರಶಸ್ತಿಯನ್ನು ಮಂಗಳವಾರ ಘೋಷಿಸಲಾಗಿದೆ.

‘ಸಂಕೀರ್ಣವಾಗಿರುವ ವಿಶ್ವದ ಭೌತಿಕ ರಚನೆಯ ವಿಶ್ಲೇಷಣೆ ಹಾಗೂ ಹವಾಮಾನ ಬದಲಾವಣೆ ಕುರಿತು ಕೈಗೊಂಡ ಸಂಶೋಧನೆಯನ್ನು ಪರಿಗಣಿಸಿ’ ಈ ಪ್ರಶಸ್ತಿಯನ್ನು ಜಂಟಿಯಾಗಿ ಮೂವರು ವಿಜ್ಞಾನಿಗಳಿಗೆ ನೀಡಲಾಗಿದೆ ಎಂದು ರಾಯಲ್ ಸ್ವೀಡಿಶ್ ಅಕಾಡೆಮಿ ಆಫ್ ಸೈನ್ಸಸ್ ತಿಳಿಸಿದೆ.

ಈ ಪ್ರತಿಷ್ಠಿತ ಪ್ರಶಸ್ತಿಯ ಬಹುಮಾನದ ಮೊತ್ತ ₹ 8.56 ಕೋಟಿ (1.15 ಮಿಲಿಯನ್ ಡಾಲರ್).

ಓದಿ:Nobel Prize| ಅಮೆರಿಕದ ಇಬ್ಬರು ವಿಜ್ಞಾನಿಗಳಿಗೆ ‘ವೈದ್ಯಕೀಯ ನೊಬೆಲ್’

ಜಪಾನ್ ಮೂಲದ ಮನಬೆ ಅವರು ಅಮೆರಿಕದ ಪ್ರಿನ್ಸ್‌ಟನ್ ವಿಶ್ವವಿದ್ಯಾಲಯದಲ್ಲಿ ಹವಾಮಾನವಿಜ್ಞಾನ ವಿಭಾಗದಲ್ಲಿ ಹಾಗೂ ಹ್ಯಾಸಲ್‌ಮನ್ ಅವರು ಜರ್ಮನಿಯ ಹ್ಯಾಂಬರ್ಗನಲ್ಲಿರುವ ಮ್ಯಾಕ್ಸ್ ಪ್ಲ್ಯಾಂಕ್ ಇನ್ಸ್‌ಟಿಟ್ಯೂಟ್ ಆಫ್ ಮಿಟಿಯೊರಾಲಜಿಯಲ್ಲಿ ಪ್ರಾಧ್ಯಾಪಕರಾಗಿದ್ದಾರೆ.

ಪಾರಿಸಿ ಅವರು ಅವರು ಇಟಲಿಯ ಸೇಪಿಯಂಜಾ ಯುನಿವರ್ಸಿಟಿ ಆಫ್ ರೋಮ್‌ನಲ್ಲಿ ಪ್ರಾಧ್ಯಾಪಕ.

ಮನಬೆ ಹಾಗೂ ಹ್ಯಾಸಲ್‌ಮನ್ ಅವರು ಹವಾಮಾನ ಬದಲಾವಣೆ ಕ್ಷೇತ್ರದಲ್ಲಿ ಗಮನಾರ್ಹ ಸಂಶೋಧನೆ ಕೈಗೊಂಡಿದ್ದಾರೆ.

‘ವಾತಾವರಣದಲ್ಲಿ ಇಂಗಾಲದ ಡೈಆಕ್ಸೈಡ್ ಮಟ್ಟದಲ್ಲಿನ ಹೆಚ್ಚಳಕ್ಕೆ ತಕ್ಕಂತೆ, ಭೂಮಿಯ ಮೇಲ್ಮೈಯ ಉಷ್ಣಾಂಶದಲ್ಲಿ ಯಾವ ರೀತಿ ಹೆಚ್ಚಳ ಕಂಡುಬರುತ್ತದೆ ಎಂಬುದನ್ನು ವಿವರಿಸುವ ಮಾದರಿಯನ್ನು ಮನಬೆ ಸಿದ್ಧಪಡಿಸಿದ್ದಾರೆ.

ಭೂಮಿಯು ಸೂರ್ಯನಿಂದ ಪಡೆಯುವ ಉಷ್ಣಶಕ್ತಿಯನ್ನು ಪುನಃ ತನ್ನ ವಾತಾವರಣದಲ್ಲಿ ಯಾವ ರೀತಿ ಪ್ರಸರಣ ಮಾಡುತ್ತದೆ ಎಂಬುದನ್ನು ವಿವರಿಸಲು ಮನಬೆ ಅವರು ‘ಭೌತಿಕ ಮಾದರಿ’ಯನ್ನು ಅಭಿವೃದ್ಧಿಪಡಿಸಿದ್ದಾರೆ.

ವಾತಾವರಣದಲ್ಲಿ ಸಾಕಷ್ಟು ಏರುಪೇರು ಕಂಡುಬಂದರೂ, ‘ಹವಾಮಾನ ಮಾದರಿ‘ಗಳು ವಿಶ್ವಾಸಾರ್ಹ ಎಂಬುದರ ಕುರಿತು ಹ್ಯಾಸಲ್‌ಮನ್ ಅವರು ಸಂಶೋಧನೆ ನಡೆಸಿದ್ದಾರೆ.

ಗಣಿತ, ಜೀವವಿಜ್ಞಾನ ಹಾಗೂ ಮಷಿನ್ ಲರ್ನಿಂಗ್‌ನ ಸೂತ್ರಗಳನ್ನು ಬಳಸಿಕೊಂಡು, ವಸ್ತುಗಳ ಸಂಕೀರ್ಣ ಸಂರಚನೆಯನ್ನು ಪಾರಿಸಿ ಅವರು ವಿಶ್ಲೇಷಿಸಿದ್ದಾರೆ ಎಂದು ನೊಬೆಲ್ ಪ್ರಶಸ್ತಿ ಸಮಿತಿಯ ತೀರ್ಪುಗಾರರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.