ಜರುಸಲೇಂ: ದಾಳಿಯಲ್ಲಿ ಲೆಬನಾನ್ನ ಮೂವರು ಸೈನಿಕರು ಮೃತಪಟ್ಟಿರುವುದಕ್ಕೆ ಇಸ್ರೇಲ್ ಸೇನೆ ಸೋಮವಾರ ಕ್ಷಮೆಯಾಚಿಸಿದೆ.

ನಮ್ಮ ಹೋರಾಟ ದೇಶದ ಸೇನೆಯೊಂದಿಗೆ ಅಲ್ಲ. ವಾಹನದಲ್ಲಿ ಹಿಜ್ಬುಲ್ಲಾ ಉಗ್ರರು ಇದ್ದರು ಎಂಬ ಶಂಕೆ ಮೇಲೆ ಸೈನಿಕರಿದ್ದ ವಾಹನದ ಮೇಲೆ ದಾಳಿ ನಡೆಸಲಾಗಿತ್ತು ಎಂದು ಸ್ಪಷ್ಟನೆ ನೀಡಿದೆ.

‘ಹಮಾಸ್ ನಾಯಕ ಯಹ್ಯಾ ಸಿನ್ವಾರ್ ಹತ್ಯೆ ಬಳಿಕ ಇಸ್ರೇಲ್ ವಿರುದ್ಧ ಯುದ್ಧದ ಇನ್ನೊಂದು ಹಂತಕ್ಕೆ ತಲುಪಿದ್ದೇವೆ’ ಎಂದು ಹಿಜ್ಬುಲ್ಲಾ ಸಂಘಟನೆ ಕಳೆದ ವಾರ ಹೇಳಿತ್ತು.

ಸಿನ್ವಾರ್ ಸಾವು ಯುದ್ಧಕ್ಕೆ ಪೂರ್ಣವಿರಾಮ ಇಡಲಿದೆ ಎಂದು, ಇಸ್ರೇಲ್ನ ಮಿತ್ರರಾಷ್ಟ್ರಗಳು, ಗಾಜಾ ಮತ್ತಿತರ ಪ್ರದೇಶಗಳ ನಿವಾಸಿಗಳು ಭಾವಿಸಿದ್ದರು. ಆದರೆ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಹಮಾಸ್, ಇಬ್ಬರೂ ಗುರಿ ಸಾಧನೆವರೆಗೂ ಯುದ್ಧ ಮುಂದುವರಿಸುವ ಪ್ರತಿಜ್ಞೆ ಮಾಡಿದ್ದಾರೆ.

ಲೆಬನಾನ್ನ ಸೇನೆಯು ದೇಶದ ಗೌರವಾನ್ವಿತ ಸಂಸ್ಥೆ. ಆದರೆ ಹಿಜ್ಬುಲ್ಲಾ ಸಂಘಟನೆಯನ್ನು ನಿಯಂತ್ರಿಸುವಲ್ಲಿ ಮತ್ತು ಇಸ್ರೇಲ್ ಅತಿಕ್ರಮಣದಿಂದ ದೇಶವನ್ನು ಕಾಪಾಡಿಕೊಳ್ಳುವಲ್ಲಿ ವಿಫಲವಾಗಿದೆ.

ದಾಳಿ ತೀವ್ರಗೊಳಿಸಿದ ಇಸ್ರೇಲ್

ಉತ್ತರ ಗಾಜಾಪಟ್ಟಿಯಲ್ಲಿ ಇಸ್ರೇಲ್ ದಾಳಿಯನ್ನು ತೀವ್ರಗೊಳಿಸಿದ ಪರಿಣಾಮವಾಗಿ ಮನೆಗಳು ಶಾಲೆಗಳು ನಿರಾಶ್ರಿತ ಶಿಬಿರಗಳು ನೆಲಸಮವಾಗಿವೆ ಎಂದು ನಿವಾಸಿಗಳು ತಿಳಿಸಿದ್ದಾರೆ. ಇಸ್ರೇಲಿ ಸೈನಿಕರು ಶಾಲೆಯನ್ನು ಸ್ಫೋಟಗೊಳಿಸಿದರು. ಅದಕ್ಕೂ ಮುನ್ನ ಹಲವರನ್ನು ಬಂಧಿಸಿದರು. ಆ ಬೆಂಕಿಯು ಆಸ್ಪತ್ರೆಯ ಜನರೇಟರ್ಗಳಿಗೆ ತಗುಲಿ ವಿದ್ಯುತ್ ವ್ಯತ್ಯಯವಾಗಿದೆ ಎಂದು ಆಸ್ಪತ್ರೆ ಸಿಬ್ಬಂದಿ ತಿಳಿಸಿದ್ದಾರೆ. ದಾಳಿಯ ಪರಿಣಾಮ ಜಬಾಲಿಯಾದಲ್ಲಿ 18 ಮಂದಿ ಮತ್ತು ಗಾಜಾದಲ್ಲಿ 8 ಮಂದಿ ಮೃತಪಟ್ಟಿದ್ದಾರೆ ಎಂದು ಪ್ಯಾಲೆಸ್ಟೀನ್ನ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.