ಮಾಸ್ಕೊ: ‘ಗುರುವಾರ ಉಕ್ರೇನ್ನಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ ವಿಶೇಷ ಅಧಿವೇಶನದಲ್ಲಿ ರಷ್ಯಾ ಭಾಗವಹಿಸುವುದಿಲ್ಲ’ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಮಾರಿಯಾ ಜಖರೋವಾ ಹೇಳಿದ್ದಾರೆ.

ರಷ್ಯಾದ ಆಕ್ರಮಣದಿಂದ ಉಕ್ರೇನ್ನಲ್ಲಿ ಹದಗೆಡುತ್ತಿರುವ ಮಾನವ ಹಕ್ಕುಗಳ ಪರಿಸ್ಥಿತಿಯನ್ನು ಪರಿಶೀಲಿಸುವಂತೆ ಕೀವ್ ಕೋರಿತ್ತು. ಹೀಗಾಗಿ ವಿಶೇಷ ಅಧಿವೇಶನ ನಡೆಸಲಾಗುವುದು ಎಂದು ಮಂಡಳಿ ಸೋಮವಾರ ತಿಳಿಸಿತ್ತು.

ಈ ಕುರಿತು ಮಾಹಿತಿ ನೀಡಿದ ಜಖರೋವಾ, ‘ವಿಶೇಷ ಅಧಿವೇಶನ ಸೋಗಿನಲ್ಲಿ ಏರ್ಪಡಿಸಲಾಗಿರುವ ಈ ರಾಜಕೀಯ ಪ್ರದರ್ಶನವನ್ನು ರಷ್ಯಾವು ಬೆಂಬಲಿಸುವುದಿಲ್ಲ. ಮಿಲಿಟರಿ ಕಾರ್ಯಾಚರಣೆಯ ನಿಜವಾದ ಉದ್ದೇಶ ಹಾಗೂ ನೈಜ ಪರಿಸ್ಥಿತಿಗಳ ಬಗ್ಗೆ ನಮ್ಮ ವಾದ ಹಾಗೂ ವಿವರಣೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಲಾಗಿದೆ’ ಎಂದು ಹೇಳಿದರು.

‘ಪಾಶ್ಚಾತ್ಯ ರಾಷ್ಟ್ರಗಳು ರಷ್ಯಾವನ್ನು ವಿರೋಧಿಸುವ ಕ್ರಮದಲ್ಲಿ, ಈ ಬಾರಿಯೂ ನಮ್ಮ ವಾದವನ್ನು ಕೇಳುವುದಿಲ್ಲ’ ಎಂದು ಜಖರೋವಾ ತಿಳಿಸಿದರು.

ಓದಿ...ಶ್ರೀಲಂಕಾದಲ್ಲಿ ಹಿಂಸಾಚಾರ: ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ ಕ್ರಿಕೆಟಿಗರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.