ಬೆಂಗಳೂರು: ದೇಶದಿಂದ ಪಲಾಯನ ಮಾಡಿ ಭಾರತದಲ್ಲಿ ಆಶ್ರಯ ಪಡೆದಿರುವ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ರಾಜತಾಂತ್ರಿಕ ಪಾಸ್‌ಪೋರ್ಟ್ ಅನ್ನು ರದ್ದು ಮಾಡುವ ಪ್ರಕ್ರಿಯೆಗೆ ಬಾಂಗ್ಲಾದೇಶದ ಮಧ್ಯಂತರ ಸರ್ಕಾರ ನಿರ್ಧರಿಸಿದೆ ಎಂದು ‘ಢಾಕಾ ಟ್ರಿಬ್ಯೂನ್’ ವರದಿ ಮಾಡಿದೆ.
.ಬಾಂಗ್ಲಾ ನಾಶ ಮಾಡಿದ ಹಸೀನಾ: ಮಧ್ಯಂತರ ಸರ್ಕಾರದ ಮುಖ್ಯಸ್ಥ ಮೊಹಮ್ಮದ್ ಯೂನುಸ್ ಕಿಡಿ.
‘ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಸಂಪುಟದಲ್ಲಿ ಸಚಿವರಾಗಿದ್ದವರ ಹಾಗೂ ಅವರ ಪಕ್ಷದ ಸಂಸದರ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದು ಮಾಡುವ ಪ್ರಕ್ರಿಯೆ ಆರಂಭಿಸಲಾಗಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ಗುರುವಾರ ಹೇಳಿದ್ದಾರೆ.

ಈ ಬಗ್ಗೆ ಅಧಿಕೃತ ಪ್ರಕಟಣೆ ಇನ್ನಷ್ಟೇ ಹೊರಡಿಸಬೇಕಿದ್ದು, ಕಡ್ಡಾಯ ನಿವೃತ್ತಿ ಪಡೆಯಲು ಸೂಚಿಸಲಾಗಿರುವ ಅಧಿಕಾರಿಗಳು ಅಥವಾ ಗುತ್ತಿಗೆ ಅಂತ್ಯಗೊಳಿಸಲಾಗಿರುವ ನೌಕರರಿಗೂ ಈ ನಿಯಮ ಅನ್ವಯವಾಗಲಿದೆ ಎಂದು ಹೆಸರು ಗೌಪ್ಯವಾಗಿಡಬೇಕು ಎನ್ನುವ ಷರತ್ತಿನೊಂದಿಗೆ ಗೃಹ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
.ನರಮೇಧ ಆರೋಪ: ಹಸೀನಾ, ಇತರ 9 ಮಂದಿ ವಿರುದ್ಧ ತನಿಖೆ ಆರಂಭ.
ಅವರು ಯಾರು ಕೂಡ ಯಾವುದೇ ಅಧಿಕೃತ ಸ್ಥಾನಮಾನದಲ್ಲಿ ಇರದ ಕಾರಣ, ರೆಡ್ ಪಾಸ್‌ಪೋರ್ಟ್ ಎಂದು ಕರೆಸಿಕೊಳ್ಳುವ ರಾಜತಾಂತ್ರಿಕ ಪಾಸ್‌ಪೋರ್ಟ್ ಅನ್ನು ರದ್ದು ಮಾಡು ನಿರ್ಧಾರವನ್ನು ಮಧ್ಯಂತರ ಸರ್ಕಾರ ತೆಗೆದುಕೊಂಡಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

‘ಈ ಬಗ್ಗೆ ವಲಸೆ ಹಾಗೂ ಪಾಸ್‌ಪೋರ್ಟ್ ಇಲಾಖೆಗೆ ಗೃಹ ಸಚಿವಾಲಯವು ಮೌಖಿಕ ಸೂಚನೆ ನೀಡಿದ್ದು, ಗುರುವಾರ ಲಿಖಿತ ಸೂಚನೆ ನೀಡುವ ಸಾಧ್ಯತೆ ಇದೆ’ ಎಂದು ಅವರು ಹೇಳಿದ್ದಾರೆ.
.ಶೇಖ್ ಹಸೀನಾ ಪದಚ್ಯುತಿ ಹಿಂದೆ ತನ್ನ ಕೈವಾಡವಿಲ್ಲ ಎಂದ ಅಮೆರಿಕ.
(ಏಜೆನ್ಸಿ ಮಾಹಿತಿ ಸೇರಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.