ಬಿಜಿಂಗ್: ಚೀನಾದ ಬಾಹ್ಯಾಕಾಶ ನೌಕೆಯೊಂದು ಅಂತರಿಕ್ಷವನ್ನು ಸುತ್ತಿ 276 ದಿನಗಳ ನಂತರ ಭೂಮಿಗೆ ಬಂದು ತಲುಪಿದೆ.

ವಿಶೇಷವೆಂದರೆ ಈ ನೌಕೆಯನ್ನು ಯಾವಾಗ ಹಾರಿ ಬಿಡಲಾಗಿತ್ತು? ಏಕೆ ಹಾರಿ ಬಿಡಲಾಗಿತ್ತು? ಉದ್ದೇಶ ಏನು? ಎಷ್ಟು ಎತ್ತರ ಹಾರಿತ್ತು? ಕಕ್ಷೆಯ ವಿವರಗಳೇನು? ಎಂಬುದು ಹೊರಜಗತ್ತಿಗೆ ತಿಳಿದು ಬಂದಿಲ್ಲ. ಹಾಗಾಗಿ ಇದೊಂದು ನಿಗೂಢ ನೌಕೆ ಎಂದು ವಿಶ್ಲೇಷಿಸಲಾಗುತ್ತಿದೆ.

ಆಗಸ್ಟ್ ಆರಂಭದಲ್ಲಿ ನಭಕ್ಕೆ ಹಾರಿಬಿಡಲಾಗಿತ್ತು ಎನ್ನಲಾಗಿದ್ದ ಈ ನೌಕೆಯು ಸೋಮವಾರ ವಾಯವ್ಯ ಚೀನಾದ ಜಿಯುಕ್ವಾನ್ ಉಡಾವಣಾ ಕೇಂದ್ರಕ್ಕೆ ಯಶಸ್ವಿಯಾಗಿ ಬಂದಿಳಿದಿದೆ ಎಂದು ಚೀನಾದ ಸರ್ಕಾರಿ ಸುದ್ದಿ ವಾಹಿನಿ ವರದಿ ಮಾಡಿದೆ.

ಚೀನಾ ಮರುಬಳಕೆಯ ಬಾಹ್ಯಾಕಾಶ ನೌಕೆಗಳನ್ನು ತಯಾರಿಸುವಲ್ಲಿ ಹೆಚ್ಚು ಶ್ರಮವಹಿಸುತ್ತಿದ್ದು ಅದರ ಪ್ರಯೋಗಾರ್ಥವೇ ಈ ನೌಕೆ ಇರಬಹುದು ಎಂದು ರಾಯಿಟರ್ಸ್ ಸುದ್ದಿಸಂಸ್ಥೆ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.