ಕರಾಚಿ: ‘ಪ್ರಧಾನಿ ಇಮ್ರಾನ್ ಖಾನ್ ಭಾರತದೊಂದಿಗೆ ಶಾಂತಿ ಮತ್ತು ಸ್ನೇಹದ ಹಸ್ತವನ್ನು ಪ್ರಾಮಾಣಿಕವಾಗಿ ಬಯಸಿದ್ದಾರೆ. ಇದನ್ನು ದೇಶದ ದೌರ್ಬಲ್ಯವೆಂದು ತಿಳಿಯಬಾರದು’ ಎಂದುಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಾಜ್ವಾ
ತಿಳಿಸಿದ್ದಾರೆ.

ಕರಾಚಿಯ ನೌಕಾ ಅಕಾಡೆಮಿಯಲ್ಲಿ ಶನಿವಾರ ನಡೆದ ಪರೇಡ್ ಸಂದರ್ಭದಲ್ಲಿ ಮಾತನಾಡಿದ ಅವರು, ಇಮ್ರಾನ್ ಖಾನ್ ಅವರ ಶಾಂತಿ ಸಂಧಾನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

‘ಪಾಕಿಸ್ತಾನ ಶಾಂತಿಯನ್ನು ಬಯಸುತ್ತದೆ ಮತ್ತು ಸದಾ ಶಾಂತಿಯ ಮೇಲೆ ನಂಬಿಕೆ ಇರಿಸಿದೆ’ ಎಂದರು.

‘ಭಾರತ ಮತ್ತು ಪಾಕ್ ನಡುವಿನ ಬಾಂಧವ್ಯಕ್ಕಾಗಿ ಪ್ರಧಾನಿ ಇಮ್ರಾನ್ ಖಾನ್ ನಡೆಸುತ್ತಿರುವ ಪ್ರಯತ್ನ ಶ್ಲಾಘನೀಯ. ಶಾಂತಿಯಿಂದ ಸರ್ವರಿಗೂ ಒಳಿತಾಗುತ್ತದೆ. ಒಬ್ಬರ ಮೇಲೊಬ್ಬರು ದಾಳಿ ನಡೆಸುವ ಬದಲು ಕಾಯಿಲೆ, ಅನಕ್ಷರತೆ, ಬಡತನದ ವಿರುದ್ಧ ಹೋರಾಡಲು ಇದು ಸುಸಮಯ’ ಎಂದು ಅವರು ತಿಳಿಸಿದ್ದಾರೆ.

‘ಯುದ್ಧಗಳಿಂದ ಸಾವು, ವಿನಾಶ, ನೋವು ಉಂಟಾಗುತ್ತದೆ. ಮಾತುಕತೆಯ ಮೂಲಕ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳಬಹುದು. ಹಾಗಾಗಿ ಅಫ್ಗಾನಿಸ್ತಾನದಲ್ಲಿ ಶಾಶ್ವತವಾಗಿ ಶಾಂತಿ ನೆಲೆಸುವಂತೆ ಮಾಡಲು ನಾವು ಪ್ರಯತ್ನಿಸುತ್ತಿದ್ದೇವೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.