ವಾಷಿಂಗ್ಟನ್: ಅಮೆರಿಕದಲ್ಲಿ ಬಂದೂಕು ದಾಳಿಯಿಂದ ಮಕ್ಕಳ ಸಾವುಗಳ ಪ್ರಮಾಣ ಹೆಚ್ಚಿದೆ ಎಂದು ಅಮೆರಿಕನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ ಪ್ರಕಟಿಸಿದ ಹೊಸ ಅಧ್ಯಯನ ಹೇಳಿದೆ.

ಅಧ್ಯಯನದ ಪ್ರಕಾರ 2021ರಲ್ಲಿ 4,752 ಮಕ್ಕಳು ಬಂದೂಕು ಸಂಬಂಧಿತ ದಾಳಿಯಲ್ಲಿ ಮೃತಪಟ್ಟಿದ್ದಾರೆ. 2020ರಲ್ಲಿ 4,368, 2019ರಲ್ಲಿ 3,390 ಮಕ್ಕಳು ಮೃತರಾಗಿದ್ದಾರೆ ಎಂದು ಎಎಪಿಯ ಪೀಡಿಯಾಟ್ರಿಕ್ಸ್ ಜರ್ನಲ್ನಲ್ಲಿ ಪ್ರಕಟವಾದ ವರದಿ ತಿಳಿಸಿದೆ.

2020ರಿಂದ ಅಮೆರಿಕದಲ್ಲಿ ಮಕ್ಕಳ ಸಾವಿಗೆ ಬಂದೂಕು ದಾಳಿ ಮೊದಲ ಕಾರಣವಾಗಿದೆ. ಈ ವರ್ಷದ ಆರಂಭದಲ್ಲಿ ನಾಶ್ವಿಲ್ಲೆ ಶಾಲೆಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಮೂವರು ಮಕ್ಕಳು ಮತ್ತು ಮೂವರು ಶಿಕ್ಷಕರ ದುರಂತ ಸಾವಿನ ನಂತರ ಸಾರ್ವಜನಿಕರ ಸುರಕ್ಷತೆಯ ಬಗ್ಗೆ ಸಂಸದರು ವಿಶೇಷ ಅಧಿವೇಶನದಲ್ಲಿ ಪ್ರಸ್ತಾಪಿಸಿದ್ದರು ಎಂದು ವರದಿಯಲ್ಲಿ ಹೇಳಲಾಗಿದೆ.

ಬಂದೂಕಿನಿಂದ ಗುಂಡುಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡವರಲ್ಲಿ ಕಪ್ಪುವರ್ಣದ ಶೇ 67ರಷ್ಟು ಹಾಗೂ ಬಿಳಿ ವರ್ಣದ ಶೇ 78ರಷ್ಟು ಮಕ್ಕಳು ಸೇರಿದ್ದಾರೆ ವರದಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.