ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಕ್ಟೋಬರ್ 7ರ ದಾಳಿ ಇಸ್ರೇಲ್‌ ಅನ್ನು ಶೂನ್ಯಕ್ಕಿಳಿಸಿದೆ: ಹಮಾಸ್‌ ನಾಯಕ

Published : 7 ಅಕ್ಟೋಬರ್ 2024, 9:40 IST
Last Updated : 7 ಅಕ್ಟೋಬರ್ 2024, 9:40 IST
ಫಾಲೋ ಮಾಡಿ
Comments

ದೋಹಾ, ಕತಾರ್‌: ಕಳೆದ ವರ್ಷ ಅಕ್ಟೋಬರ್‌ 7ರಂದು ನಡೆಸಿದ ದಾಳಿಯು ಇಸ್ರೇಲ್‌ ಅನ್ನು ಶೂನ್ಯಕ್ಕಿಳಿಸಿದೆ ಎಂದು ಹಮಾಸ್‌ನ ಹಿರಿಯ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.

ಇಸ್ರೇಲ್ ಮೇಲಿನ ದಾಳಿಗೆ ಒಂದು ವರ್ಷ ತುಂಬಿದ ದಿನದಂದೇ ಅವರಿಂದ ಈ ಹೇಳಿಕೆ ಹೊರಬಿದ್ದಿದೆ. ಆ ದಾಳಿಯೇ ಗಾಜಾದಲ್ಲಿ ಯುದ್ಧಕ್ಕೆ ಮುನ್ನುಡಿ ಬರೆದಿತ್ತು.

‘ಅಲ್‌ ಅಕ್ಸಾ ಫ್ಲಡ್ (ಕಾರ್ಯಾಚರಣೆಯ ಹೆಸರು) ಇಸ್ರೇಲ್‌ ಅನ್ನು ಶೂನ್ಯಕ್ಕಿಳಿಸಿದ್ದು ಮಾತ್ರವಲ್ಲದೆ, ಅದರ ಅಸ್ತಿತ್ವಕ್ಕೂ ಬೆದರಿಕೆಯೊಡ್ಡಿದೆ’ ಎಂದು ಹಮಾಸ್ ಬಂಡುಕೋರ ಸಂಘಟನೆಯ ಮಾಜಿ ಮುಖ್ಯಸ್ಥ ಖಾಲಿದ್ ಮೆಶಾಲ್, ಅಲ್‌ ಅರಬಿಯಾ ಟಿ.ವಿ. ಜೊತೆಗಿನ ಸಂದರ್ಶನದಲ್ಲಿ ಹೇಳಿದ್ದಾರೆ.

‘ಅಲ್-ಅಕ್ಸಾ ಕಬಳಿಸಲು ಹಾಗೂ ಆಕ್ರಮಿಸಲು ಇಸ್ರೇಲ್ ಮಾಡುತ್ತಿರುವ ತೀವ್ರಗತಿಯ ಯೋಜನೆಗಳಿಗೆ ಆ ದಾಳಿ ಸಹಜ ಪ್ರತಿಕ್ರಿಯೆಯಾಗಿತ್ತು’ ಎಂದು ಅವರು ಹೇಳಿದ್ದಾರೆ. ಅಲ್ಲದೆ ದೀರ್ಘಕಾಲಿನ ಶಾಂತಿ ಒಪ್ಪಂದದ ಹೊರತಾಗಿಯೂ ಇಸ್ರೇಲ್‌, ಈಜಿಪ್ಟ್ ಹಾಗೂ ಜೋರ್ಡಾನ್‌ಗೂ ಬೆದರಿಕೆಯೊಡ್ಡುತ್ತಿದೆ’ ಎಂದಿದ್ದಾರೆ.

ಆ ವಲಯದಲ್ಲಿರುವ ಪ್ರತಿಯೊಬ್ಬರೂ ತನಗೆ ಅಧೀನರಾಗಿರಬೇಕೆಂದು ಇಸ್ರೇಲ್ ಬಯಸುತ್ತದೆ. ತನ್ನ ವಿರುದ್ಧ ಹೋರಾಟ ಮಾಡದ ದೇಶಗಳ ಬಗ್ಗೆಯೂ ಇಸ್ರೇಲ್ ಇದನ್ನೇ ಬಯಸುತ್ತದೆ. ಅರಬ್ ಹಾಗೂ ಇಸ್ಲಾಮಿಕ್ ದೇಶಗಳ ಭದ್ರತೆಗಳ ಮೇಲೆ ಎಲ್ಲಾ ಕಡೆಯೂ ಇಸ್ರೇಲ್ ದಾಳಿ ನಡೆಸುತ್ತದೆ’ ಎಂದು ಅವರು ಹೇಳಿದ್ದಾರೆ.

ಇಸ್ರೇಲ್ ಅಧಿಕಾರಿಗಳ ಮಾಹಿತಿ ಪ್ರಕಾರ ಈ ಯುದ್ದ ಆರಂಭವಾದ ಬಳಿಕ 1,205 ಮಂದಿ ಸಾವಿಗೀಡಾಗಿದ್ದಾರೆ. ಇದರಲ್ಲಿ ಬಹುತೇಕರು ನಾಗರಿಕರು. ಈ ಮೊತ್ತದಲ್ಲಿ ಸಾವಿಗೀಡಾದ ಒತ್ತೆಯಾಳುಗಳ ಸಂಖ್ಯೆಯೂ ಸೇರಿದೆ.

ಗಾಜಾದಲ್ಲಿ ಇಸ್ರೇಲ್ ದಾಳಿಯಿಂದಾಗಿ ಇದುವರೆಗೂ 41,870 ಪ್ಯಾಲೆಸ್ಟೀನಿಯನ್ನರು ಸಾವಿಗೀಡಾಗಿದ್ದು, ಇದರಲ್ಲಿ ಬಹುತೇಕ ಮಂದಿ ಜನಸಮಾನ್ಯರೇ. ಗಾಜಾದಲ್ಲಿ ಹಮಾಸ್ ನಡೆಸುತ್ತಿರುವ ಆರೋಗ್ಯ ಇಲಾಖೆ ನೀಡಿದ ಸಂಖ್ಯೆ ಇದು.

(ವಿವಿಧ ಏಜೆನ್ಸಿಗಳ ಮಾಹಿತಿ ಆಧರಿಸಿ ಬರೆದ ಸುದ್ದಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT