ಬರ್ಲಿನ್: ಜರ್ಮನಿಯ ಸಂಸತ್ ಬುಧವಾರ ಒಲಾಫ್ ಶೋಲ್ಜ್ ಅವರನ್ನು ದೇಶದ ಒಂಬತ್ತನೇ ಛಾನ್ಸಲರ್ ಆಗಿ ಆಯ್ಕೆ ಮಾಡಿತು. 16 ವರ್ಷ ಅಧಿಕಾರ ನಡೆಸಿದ ಅಂಗೆಲಾ ಮೆರ್ಕೆಲ್ ಅವರಿಂದ ತೆರವಾದ ಸ್ಥಾನವನ್ನು ಶೋಲ್ಜ್ ತುಂಬಲಿದ್ದಾರೆ.

395–303 ಮತಗಳ ಅಂತರದೊಂದಿಗೆ ಶೋಲ್ಜ್ ಅವರು ಛಾನ್ಸಲರ್ ಆಗಿ ಆಯ್ಕೆಯಾದರು.736 ಸದಸ್ಯರಿರುವ ಸಂಸತ್‌ನ ಕೆಳಮನೆಯಲ್ಲಿ ಶೋಲ್ಜ್ ನೇತೃತ್ವದ ಮೂರು ಪಕ್ಷಗಳ ಸಮ್ಮಿಶ್ರ ಒಕ್ಕೂಟ 416 ಸ್ಥಾನಗಳನ್ನು ಹೊಂದಿದೆ.

ಮೆರ್ಕೆಲ್ ಅವರು ಈಗ ಸಂಸತ್ ಸದಸ್ಯರಲ್ಲ. ಹೀಗಾಗಿ ವೀಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದ ಅವರು ಮತದಾನವನ್ನು ವೀಕ್ಷಿಸಿದರು. ಕಲಾಪ ಆರಂಭವಾಗುತ್ತಿದ್ದಂತೆಯೇ ಸದಸ್ಯರು ಎದ್ದುನಿಂತು ಮೆರ್ಕೆಲ್ ಅವರ ಸೇವೆಗೆ ಕೃತಜ್ಞತೆ ಸಲ್ಲಿಸಿದರು.

ಜರ್ಮನಿಯನ್ನು ಆಧುನಿಕ ಪಥದಲ್ಲಿ ಕೊಂಡೊಯ್ಯುವ ಮತ್ತು ಹವಾಮಾನ ಬದಲಾವಣೆಗೆ ದೇಶವನ್ನು ಸಜ್ಜುಗೊಳಿಸುವ ಬಹಳ ದೊಡ್ಡ ಹೊಣೆಗಾರಿಕೆ ಶೋಲ್ಜ್ (63) ಅವರ ಮೇಲಿದ್ದು, 2018ರಿಂದೀಚೆಗೆ ಅವರು ವೈಸ್ ಛಾನ್ಸಲರ್ ಆಗಿದ್ದುದು ಮತ್ತು ಹಣಕಾಸು ಸಚಿವರಾಗಿದ್ದುದು ಅವರ ಆಡಳಿತ ನಿರ್ವಹಣೆಗೆ ನೆರವಾಗುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ... ಸೂಪರ್ ಸಾನಿಕ್ ಕ್ರೂಸ್ ಕ್ಷಿಪಣಿ ‘ಬ್ರಹ್ಮೋಸ್’ನ ಪರೀಕ್ಷೆ ಯಶಸ್ವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.