ಗಾಜಾಪಟ್ಟಿ: ದಕ್ಷಿಣ ಗಾಜಾದ ಮೇಲೆ ಇಸ್ರೇಲ್ ನಡೆಸಿರುವ ವಾಯುದಾಳಿಯಲ್ಲಿ ಪ್ಯಾಲೆಸ್ಟೀನ್ ಪತ್ರಕರ್ತ ಹಾಗೂ ಆತನ ಕುಟುಂಬದ 11 ಜನ ಸದಸ್ಯರು ಮೃತಪಟ್ಟಿರುವುದಾಗಿ ವರದಿಯಾಗಿದೆ.

ಘಟನೆಯಲ್ಲಿ ಪ್ಯಾಲೆಸ್ಟೀನ್ ಅಧಿಕೃತ ಟಿವಿ ಚಾನಲ್ ಒಂದರ ಪ್ರತಿನಿಧಿಯಾಗಿದ್ದ ಮೊಹಮ್ಮದ್ ಅಬು ಹತಾಬ್ ಎನ್ನುವರು ಹಾಗೂ ಆವರ ಅವರ ಪತ್ನಿ, ಮಕ್ಕಳು, ಸೋದರರು, ಸಂಬಂಧಿಗಳು ಮೃತರಾಗಿದ್ದಾರೆ.

ಗುರುವಾರ ದಕ್ಷಿಣ ಗಾಜಾದ ಖಾನ್ ಯೂನಸ್ ನಗರದಲ್ಲಿ ಈ ಘಟನೆ ನಡೆದಿದ್ದು, ಇಸ್ರೇಲ್ ಸೇನೆ ಈ ಬಗ್ಗೆ ಯಾವುದೇ ತಕ್ಷಣದ ಪ್ರತಿಕ್ರಿಯೆ ನೀಡಿಲ್ಲ.

ಇತ್ತೀಚೆಗೆ ಆರಂಭವಾದ ಪ್ಯಾಲೆಸ್ಟೀನ್–ಇಸ್ರೇಲ್ ಸಂಘರ್ಷದಲ್ಲಿ ಇದುವರೆಗೆ 36 ಜನ ಪತ್ರಕರ್ತರು ಸಾವಿಗೀಡಾಗಿದ್ದು, ಇದರಲ್ಲಿ 31 ಪತ್ರಕರ್ತರು ಪ್ಯಾಲೆಸ್ಟೀನ್‌ಗೆ ಸೇರಿದವರಾಗಿದ್ದಾರೆ. ಒಬ್ಬರು ಮತ್ರ ಇಸ್ರೇಲ್‌ನವರು.

ಪತ್ರಕರ್ತ ಹಾಗೂ ಆತನ ಕುಟುಂಬದ ಮೇಲೆ ನಡೆದ ದಾಳಿಯನ್ನು ಜರ್ನಲಿಸ್ಟ್ಸ್ ವಿತೌಟ್ ಬಾರ್ಡರ್ಸ್ ಸಂಘಟನೆ ಖಂಡಿಸಿದೆ ಎಂದು ದಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.