ಅಬುಜಾ (ನೈಜೀರಿಯಾ): ಪ್ರಧಾನಿ ನರೇಂದ್ರ ಮೋದಿ ಅವರು ಮೂರು ರಾಷ್ಟ್ರಗಳ (ನೈಜೀರಿಯಾ, ಬ್ರೆಜಿಲ್ ಮತ್ತು ಗಯಾನ) ಪ್ರವಾಸ ಕೈಗೊಂಡಿದ್ದು, ಭಾನುವಾರ ನೈಜೀರಿಯಾ ತಲುಪಿದ್ದಾರೆ. ಇದರೊಂದಿಗೆ ಭಾರತದ ಪ್ರಧಾನಿಯೊಬ್ಬರು 17 ವರ್ಷಗಳ ಬಳಿಕ ಈ ದೇಶಕ್ಕೆ ಭೇಟಿಕೊಟ್ಟಂತಾಗಿದೆ.

ಮೋದಿ ಅವರು ನೈಜೀರಿಯಾ ತಲುಪಿರುವ ಸುದ್ದಿಯನ್ನು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ ಜೈಸ್ವಾಲ್ ಅವರು ಎಕ್ಸ್/ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.

'ಪ್ರಧಾನಿ ನರೇಂದ್ರ ಮೋದಿ ಅವರು ನೈಜೀರಿಯಾದ ಅಬುಜಾ ನಗರ ತಲುಪಿದ್ದಾರೆ. ಫೆಡರಲ್ ಕ್ಯಾಪಿಟಲ್ ಟೆರಿಟರಿ ಸಚಿವ ನೀಸಮ್ ಎಜೆನ್ವೊ ವೈಕ್ ಅವರು 'ನಗರಕ್ಕೆ ಕೀಲಿಕೈ' ನೀಡುವ ಮೂಲಕ ಮೋದಿ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದ್ದಾರೆ. ಈ ಕೀಲಿಕೈ ನೈಜೀರಿಯನ್ನರು ಪ್ರಧಾನಿ ಅವರ ಮೇಲೆ ಇಟ್ಟಿರುವ ನಂಬಿಕೆ ಮತ್ತು ಗೌರವದ ಸಂಕೇತವಾಗಿದೆ' ಎಂದು ತಿಳಿಸಿದ್ದಾರೆ.

ವಿದೇಶಾಂಗ ಸಚಿವಾಲಯವೂ ಮೋದಿ ಅವರ ಚಿತ್ರಗಳನ್ನು ಹಂಚಿಕೊಂಡಿದೆ.

ಮೋದಿ ಭೇಟಿಗೂ ಮುನ್ನ ಟ್ವೀಟ್ ಮಾಡಿರುವ ನೈಜೀರಿಯಾ ಅಧ್ಯಕ್ಷ ಬೋಲಾ ಅಹ್ಮದ್ ತಿನುಡು, ಪ್ರಧಾನಿಯನ್ನು ಸ್ವಾಗತಿಸಲು ಎದುರು ನೋಡುತ್ತಿರುವುದಾಗಿ ಬರೆದುಕೊಂಡಿದ್ದಾರೆ.

'ನೈಜೀರಿಯಾಕ್ಕೆ ಮೊದಲ ಸಲ ಬರುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಲು ಎದುರು ನೋಡುತ್ತಿದ್ದೇನೆ. ಇದು, 2007ರ ನಂತರ ಭಾರತೀಯ ಪ್ರಧಾನಿ ನಮ್ಮ ದೇಶಕ್ಕೆ ಕೈಗೊಳ್ಳುತ್ತಿರುವ ಮೊದಲ ಭೇಟಿಯೂ ಹೌದು. ಉಭಯ ದೇಶಗಳ ನಡುವಣ ಪಾಲುದಾರಿಕೆಯನ್ನು ವಿಸ್ತರಿಸಲು ಹಾಗೂ ನಿರ್ಣಾಯಕ ಕ್ಷೇತ್ರಗಳಲ್ಲಿ ಸಹಕಾರ ಹೆಚ್ಚಿಸುವ ನಿಟ್ಟಿನಲ್ಲಿ ಚರ್ಚೆ ನಡೆಸಲಿದ್ದೇವೆ' ಎಂದು ತಿಳಿಸಿದ್ದಾರೆ.

ನೈಜೀರಿಯಾದ ಅಧ್ಯಕ್ಷರ ಪೋಸ್ಟ್ಗೆ ಅಬುಜಾ ತಲುಪಿದ ನಂತರ ಪ್ರತಿಕ್ರಿಯಿಸಿರುವ ಮೋದಿ, ಆತ್ಮೀಯ ಸ್ವಾಗತಕ್ಕೆ ಕೃತಜ್ಞತೆಗಳು. ಈ ಭೇಟಿಯು ಉಭಯ ದೇಶಗಳ ದ್ವಿಪಕ್ಷೀಯ ಸ್ನೇಹವನ್ನು ಇನ್ನಷ್ಟು ಗಟ್ಟಿಯಾಗಿಸಲಿ ಎಂದಿದ್ದಾರೆ. ವಿಮಾನ ನಿಲ್ದಾಣದಲ್ಲಿ ಕ್ಲಿಕ್ಕಿಸಿದ ಹಲವು ಚಿತ್ರಗಳನ್ನೂ ಹಂಚಿಕೊಂಡಿದ್ದಾರೆ.

ಪಶ್ಚಿಮ ಆಫ್ರಿಕಾ ಪ್ರದೇಶಕ್ಕೆ ಮೋದಿ ಅವರು ಕೈಗೊಂಡ ಮೊದಲ ಭೇಟಿ ಇದಾಗಿದೆ.

ನೈಜೀರಿಯಾ ಬಳಿಕ ಬ್ರೆಜಿಲ್ಗೆ ತೆರಳಲಿರುವ ಮೋದಿ, ರಿಯೊ ಡಿ ಜನೈರೊದಲ್ಲಿ ನವೆಂಬರ್ 18–19ರಂದು ನಡೆಯಲಿರುವ ಜಿ20 ಶೃಂಗದಲ್ಲಿ ಪಾಲ್ಗೊಳ್ಳಲಿದ್ದಾರೆ. ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಮತ್ತು ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರೂ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.

ನಂತರ ಮೋದಿ ಅವರು ನವೆಂಬರ್ 19ರಿಂದ 21ರ ವರೆಗೆ ಗಯಾನ ಪ್ರವಾಸದಲ್ಲಿರಲಿದ್ದಾರೆ. ಇದರೊಂದಿಗೆ ಭಾರತದ ಪ್ರಧಾನಿಯೊಬ್ಬರು ಗಯಾನಕ್ಕೆ 50 ವರ್ಷಗಳ ಬಳಿಕ ಭೇಟಿ ನೀಡಿದಂತಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.