ಸೋಮವಾರ, 8 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚುನಾವಣೆಯಲ್ಲಿ ಸೋಲು: ಪ್ರಧಾನಿ ಹುದ್ದೆಗೆ ರಿಷಿ ಸುನಕ್‌ ರಾಜೀನಾಮೆ

Published 5 ಜುಲೈ 2024, 11:41 IST
Last Updated 5 ಜುಲೈ 2024, 11:41 IST
ಅಕ್ಷರ ಗಾತ್ರ

ಲಂಡನ್‌: ಬ್ರಿಟನ್‌ ಸಂಸತ್ತಿಗೆ ನಡೆದ ಚುನಾವಣೆಯಲ್ಲಿ ಕನ್ಸರ್ವೇಟಿವ್‌ ಪಕ್ಷ ಸೋಲು ಕಂಡ ಹಿನ್ನೆಲೆ, ಪ್ರಧಾನಿ ರಿಷಿ ಸುನಕ್‌ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಈ ಕುರಿತು ಬಂಕಿಂಗ್‌ಹ್ಯಾಮ್‌ ಅರಮನೆ ಅಧಿಕೃತ ಮಾಹಿತಿ ನೀಡಿದೆ.

ಕಿಂಗ್‌ ಚಾರ್ಲ್ಸ್‌ ಅವರನ್ನು ಭೇಟಿಯಾದ ಸುನಕ್ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಚಾರ್ಲ್ಸ್‌ ಅವರು ರಾಜೀನಾಮೆಯನ್ನು ಸ್ವೀಕರಿಸಿದ್ದಾರೆ ಎಂದು ವರದಿಯಾಗಿದೆ.

ಕೀರ್ ಸ್ಟಾರ್ಮರ್ ನೇತೃತ್ವದ ಲೇಬರ್ ಪಕ್ಷ ಅಭೂತ ಪೂರ್ವ ಗೆಲುವು ಸಾಧಿಸಿದ್ದು, ಬ್ರಿಟನ್‌ನ ನೂತನ ಪ್ರಧಾನಿಯಾಗಿ ಕೀರ್ ಸ್ಟಾರ್ಮರ್ ಆಯ್ಕೆಯಾಗಿದ್ದಾರೆ.

ಸ್ಟಾರ್ಮರ್‌ ಗೆಲುವಿನ ಬಗ್ಗೆ ಅಧಿಕೃತ ಘೋಷಣೆ ಮುನ್ನವೇ ಪಕ್ಷ ವಿಜಯೋತ್ಸವ ಆಚರಿಸಿದೆ.

ಸ್ಟಾರ್ಮರ್‌ಗೆ ಮೋದಿ ಅಭಿನಂದನೆ

ಬ್ರಿಟನ್‌ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಲೇಬರ್ ಪಕ್ಷದ ಅಭ್ಯರ್ಥಿ ಕೀರ್ ಸ್ಟಾರ್ಮರ್ ಭಾರತ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ಭಾರತ-ಯುಕೆ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲು ಧನಾತ್ಮಕ ಸಹಯೋಗವನ್ನು ಎದುರು ನೋಡುತ್ತಿದ್ದೇವೆ ಎಂದಿದ್ದಾರೆ. 

ಇದೇ ವೇಳೆ ನಿರ್ಗಮಿತ ಪ್ರಧಾನಿ ರಿಷಿ ಸುನಕ್‌ ಅವರ ಬಗ್ಗೆ ಬರೆದುಕೊಂಡ ಮೋದಿ, ಸುನಕ್‌ ಅವರ ನಾಯಕತ್ವದಲ್ಲಿ ಭಾರತ– ಯುಕೆ ನಡುವಿನ ಸಂಬಂಧ ಮತ್ತಷ್ಟು ಗಟ್ಟಿಯಾಗಿದೆ. ಸುನಕ್‌ ಹಾಗೂ ಅವರ ಕುಟುಂಬಕ್ಕೆ ಒಳ್ಳೆಯದಾಗಲಿ ಎಂದು ಬರೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT