ಮಾಸ್ಕೊ: ಕೊರೊನಾ ವೈರಸ್‌ನ ರೂಪಾಂತರ ಮಾದರಿಯಾದ ‘ಡೆಲ್ಟಾ’ಕ್ಕಿಂತಲೂ ವೇಗವಾಗಿ ಸಾಂಕ್ರಾಮಿಕಗೊಳ್ಳುವ ಶಕ್ತಿಯುಳ್ಳ ರೂಪಾಂತರ ಮಾದರಿಯೊಂದು ರಷ್ಯಾದಲ್ಲಿ ಪತ್ತೆಯಾಗಿದೆ. ಇದರ ಸೋಂಕಿನ ಪ್ರಕರಣಗಳೂ ಅಲ್ಲಿ ವರದಿಯಾಗುತ್ತಿವೆ ಎಂದು ವರದಿಯಾಗಿದೆ.

ಇದನ್ನೂ ಓದಿ:ಚೀನಾದಲ್ಲಿ ಮತ್ತೆ ಸೋಂಕು ಹೆಚ್ಚಳ: ಹಲವೆಡೆ ಲಾಕ್ಡೌನ್, ವಿಮಾನಯಾನ ನಿರ್ಬಂಧ

‘ಎವೈ.4.2’ ಎಂದು ಗುರುತಿಸಲಾಗಿರುವ ಈ ಮಾದರಿಯು ವ್ಯಾಪಕವಾಗಿ ಹರಡುವ ಸಾಧ್ಯತೆಗಳಿವೆ ಎಂದು ‘ರಾಷ್ಟ್ರೀಯ ಗ್ರಾಹಕ ನಿಗಾ ಸಂಸ್ಥೆ’ಯ ಹಿರಿಯ ಸಂಶೋಧಕ ಕಾಮಿಲ್ ಖಾಫಿಜೋವ್ ಹೇಳಿರುವುದಾಗಿರಾಷ್ಟ್ರೀಯ ಸುದ್ದಿ ಸಂಸ್ಥೆ ‘ಆರ್‌ಐಎ’ ವರದಿ ಮಾಡಿದೆ.

ರಷ್ಯಾದಲ್ಲಿ ದಾಖಲೆಯ ಮಟ್ಟದಲ್ಲಿ ವರದಿಯಾಗುತ್ತಿರುವ ಕೋವಿಡ್ -19 ಪ್ರಕರಣಗಳ ದರವನ್ನುಈ ರೂಪಾಂತರಿ ಮಾದರಿಯು ಮತ್ತಷ್ಟು ಹೆಚ್ಚು ಮಾಡಿದೆ ಎಂದು ಅವರು ತಿಳಿಸಿದ್ದಾರೆ.

ಹೊಸ ರೂಪಾಂತರವು ಅಂತಿಮವಾಗಿ ಡೆಲ್ಟಾವನ್ನೂ ಮೀರಬಹುದು.ಆದರೆ ಆ ಪ್ರಕ್ರಿಯೆ ನಿಧಾನವಾಗಬಹುದು ಎಂದು ಕಾಮಿಲ್ ಖಾಫಿಜೋವ್ ಹೇಳಿದ್ದಾರೆ.

ಕಳೆದ 24 ಗಂಟೆಗಳಲ್ಲಿ ರಷ್ಯಾದಲ್ಲಿ 1,028 ಕೋವಿಡ್ ಸಂಬಂಧಿತ ಸಾವುಗಳು ಸಂಭವಿಸಿವೆ. ಅದೇ ಹೊತ್ತಲ್ಲೇ 34,073 ಹೊಸ ಸೋಂಕು ಪ್ರಕರಣಗಳು ವರದಿಯಾಗಿವೆ. ಹೀಗಾಗಿ ಸೋಂಕು ನಿಯಂತ್ರಿಸಲು ದೇಶದಲ್ಲಿ ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಘೋಷಣೆ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.