ಮಾಸ್ಕೊ: ರಷ್ಯಾದ ಅಣ್ವಸ್ತ್ರ ಬೆದರಿಕೆಗಳನ್ನು ಅಮೆರಿಕ ಗಂಭೀರವಾಗಿ ಪರಿಗಣಿಸಬೇಕು. ಮೂರನೇ ಮಹಾಯುದ್ಧವನ್ನು ತಪ್ಪಿಸಬೇಕು ಎಂದು ರಷ್ಯಾದ ಮಾಜಿ ಅಧ್ಯಕ್ಷ ಡಿಮಿಟ್ರಿ ಮೆಡ್ವೆಡೆವ್ ಹೇಳಿದ್ದಾರೆ.

2008 ರಿಂದ 2012ರವರೆಗೆ ರಷ್ಯಾದ ಅಧ್ಯಕ್ಷರಾಗಿದ್ದ ಮೆಡ್ವೆಡವ್, 2020ರ ವರೆಗೆ ಪ್ರಧಾನಿಯಾಗಿದ್ದರು.

ಸದ್ಯ ದೇಶದ ಭದ್ರತಾ ಮಂಡಳಿಯ ಉಪಾಧ್ಯಕ್ಷರಾಗಿರುವ ಅವರು 'ರಷ್ಯಾ ಟುಡೇ' ಸುದ್ಧಿ ಸಂಸ್ಥೆಯೊಂದಿಗೆ ಮಾತನಾಡಿದ್ದು, ಅಮೆರಿಕದ ಉನ್ನತ ನಾಯಕರು ಮೂರನೇ ವಿಶ್ವ ಯುದ್ಧವನ್ನು ಬಯಸುವುದಿಲ್ಲ. ಆದಾಗ್ಯೂ, ಅವರು ಕೆಲವು ಕಾರಣಗಳಿಂದಾಗಿ ರಷ್ಯನ್ನರು ಮಿತಿ ಮೀರುವುದಿಲ್ಲ ಎಂದು ತಪ್ಪು ತಿಳಿದಿದ್ದಾರೆ ಎಂದಿದ್ದಾರೆ.

ಆ ಮೂಲಕ ಅಮೆರಿಕ ಎಚ್ಚರ ವಹಿಸಬೇಕು ಎಂದು ಎಚ್ಚರಿಸಿದ್ದಾರೆ.

ಮುಂದುವರಿದು, ಅಮೆರಿಕದ ಮಾಜಿ ರಾಜತಾಂತ್ರಿಕ ಅಧಿಕಾರಿಯಾಗಿದ್ದ ದಿ. ಹೆನ್ರಿ ಕಿಸ್ಸಿಂಗರ್ ಅವರು ಹೊಂದಿದ್ದ 'ದೂರದೃಷ್ಟಿ ಮತ್ತು ಸೂಕ್ಷ್ಮತೆ'ಯನ್ನು ಸದ್ಯದ ಅಮೆರಿಕ ಹಾಗೂ ಯುರೋಪಿಯನ್ ರಾಜಕೀಯ ಸಂಘಟನೆಗಳು ಹೊಂದಿಲ್ಲ ಎಂದು ಪ್ರತಿಪಾದಿಸಿದ್ದಾರೆ.

'ನಮ್ಮ ಅಧ್ಯಕ್ಷರು ಪದೇ ಪದೇ ಹೇಳಿದಂತೆ, ದೇಶದ ಅಸ್ತಿತ್ವದ ವಿಚಾರದಲ್ಲಿ ಖಂಡಿತ ನಮಗೆ ಬೇರೆ ಆಯ್ಕೆಗಳಿಲ್ಲ' ಎಂದು ಒತ್ತಿ ಹೇಳಿದ್ದಾರೆ.

'ಉಕ್ರೇನ್ ವಿರುದ್ಧ ಯುದ್ಧ ಗೆಲ್ಲಲ್ಲು ನಮಗೆ ಅಣ್ವಸ್ತ್ರದ ಅಗತ್ಯವಿಲ್ಲ. ಆದರೆ, ಅದರ ಆಯ್ಕೆ ಯಾವಾಗಲೂ ಮುಕ್ತವಾಗಿರುತ್ತದೆ' ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ನ್ಯಾಟೊ ರಾಷ್ಟ್ರಗಳನ್ನು ಉದ್ದೇಶಿಸಿ ಜುಲೈನಲ್ಲಿ ಹೇಳಿದ್ದರು.

ಎರಡೂ ವರ್ಷಗಳ ಹಿಂದೆ ರಷ್ಯಾ ಸೇನೆಯು ಉಕ್ರೇನ್ನಲ್ಲಿ ವಿಶೇಷ ಕಾರ್ಯಾಚರಣೆ ಆರಂಭಿಸಿದಾಗಿನಿಂದ ನಡೆಯುತ್ತಿರುವ ಯುದ್ಧವು ಅಪಾಯಕಾರಿ ಹಂತಕ್ಕೆ ತಲುಪಿದೆ ಎಂದು ರಷ್ಯಾದ ಅಧಿಕಾರಿಗಳು ಹೇಳಿದ್ದಾರೆ.

ಎದುರಾಳಿಯನ್ನು ಹತ್ತಿಕ್ಕುವ ನಿಟ್ಟಿನಲ್ಲಿ ರಷ್ಯಾ ಪಡೆಗಳು ಪೂರ್ವ ಉಕ್ರೇನ್ನತ್ತ ದಾಳಿ ನಡೆಸುತ್ತಿವೆ.

ಅಮೆರಿಕ ಹಾಗೂ ಅದರ ಮಿತ್ರರಾಷ್ಟ್ರಗಳು, ಉಕ್ರೇನ್ಗೆ ಶಸ್ತ್ರಾಸ್ತ್ರ ರವಾನಿಸುವುದನ್ನು ಮುಂದುವರಿಸಿದರೆ, ತಕ್ಕ ಪ್ರತಿಕ್ರಿಯೆ ನೀಡಲಾಗುವುದು ಎಂಬ ಸಂದೇಶವನ್ನು ರಷ್ಯಾ ಹಲವು ದಿನಗಳಿಂದಲೂ ನೀಡುತ್ತಾ ಬಂದಿದೆ. ಇದರ ನಡುವೆ, ಉತ್ತರ ಕೊರಿಯಾವು ರಷ್ಯಾದ ಪಶ್ಚಿಮ ಪ್ರದೇಶಕ್ಕೆ ಸೇನೆಯನ್ನು ಕಳುಹಿಸಿದೆ ಎಂದು 'ನ್ಯಾಟೊ' ಆರೋಪಿಸಿದೆ.

ಯುರೋಪಿನ ಭದ್ರತೆ ಹಾಗೂ ಉಕ್ರೇನ್ನಲ್ಲಿ ಯುದ್ಧ ತೀವ್ರಗೊಳ್ಳುತ್ತಿರುವುದಕ್ಕೆ ಸಂಬಂಧಿಸಿದಂತೆ ಮಾಸ್ಕೊ ಕಳುಹಿಸಿದ ಸಂದೇಶಗಳನ್ನು ಅರಿಯಲು ಪಾಶ್ಚಿಮಾತ್ಯ ರಾಷ್ಟ್ರಗಳ ನಾಯಕರು ವಿಫವಾಗಿದ್ದಾರೆ ಎಂದೂ ರಷ್ಯಾ ಅಧಿಕಾರಿಗಳು ಹೇಳುತ್ತಿದ್ದಾರೆ.

ಇದಕ್ಕೆ ಪ್ರತಿಯಾಗಿ ಅಮೆರಿಕದ ರಾಜತಾಂತ್ರಿಕರು, ರಷ್ಯಾದೊಂದಿಗಿನ ದ್ವಿಪಕ್ಷೀಯ ಸಂಬಂಧವು ಹದಗೆಟ್ಟಿದೆ. ಆದರೆ, ಉಕ್ರೇನ್ನಲ್ಲಿ ಯುದ್ಧದ ತೀವ್ರತೆಯನ್ನು ಹೆಚ್ಚಿಸಲು ವಾಷಿಂಗ್ಟನ್ ಪ್ರಯತ್ನಿಸುವುದಿಲ್ಲ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.