ಖಾರ್ಕಿವ್ (ಉಕ್ರೇನ್): ರಷ್ಯಾದ ಪಡೆಗಳು ಖಾರ್ಕಿವ್ ನಗರದಲ್ಲಿ ಗ್ಯಾಸ್ ಪೈಪ್ಲೈನ್ ಅನ್ನು ಸ್ಫೋಟಿಸಿವೆ ಎಂದು ಉಕ್ರೇನ್ ಅಧ್ಯಕ್ಷರ ಕಚೇರಿ ಹೇಳಿದೆ.

ಖಾರ್ಕಿವ್, ಉಕ್ರೇನ್ನ ಎರಡನೇ ಅತಿದೊಡ್ಡ ನಗರ ಎನಿಸಿಕೊಂಡಿದೆ.

ಸ್ಫೋಟದಿಂದ ಪರಿಸರದ ಮೇಲೆ ಭಾರಿ ದುಷ್ಪರಿಣಾಮ ಉಂಟಾಗಬಹುದು ಎಂದು ‘ವಿಶೇಷ ಸಂವಹನ ಮತ್ತು ಮಾಹಿತಿ ರಕ್ಷಣೆಯ ರಾಷ್ಟ್ರ ಸೇವಾ ವಿಭಾಗ’ವು ಎಚ್ಚರಿಕೆ ನೀಡಿದೆ. ನಿವಾಸಿಗಳು ತಮ್ಮ ಕಿಟಕಿಗಳನ್ನು ಒದ್ದೆ ಬಟ್ಟೆ ಅಥವಾ ತೆಳುವಾದ ಬಟ್ಟೆಯಿಂದ ಮುಚ್ಚಬೇಕು ಎಂದು ಸಲಹೆ ನೀಡಲಾಗಿದೆ. ದ್ರವ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸುವಂತೆ ಸೂಚಿಸಲಾಗಿದೆ.

ರಷ್ಯಾದ ಪಡೆಗಳು ಖಾರ್ಕಿವ್ ಅನ್ನು ವಶಕ್ಕೆ ಪಡೆಯಲು ಸಾಧ್ಯವಾಗುವುದಿಲ್ಲ. ಅಲ್ಲಿ ಭೀಕರ ಯುದ್ಧ ನಡೆಯುತ್ತಿದೆ ಎಂದು ಉಕ್ರೇನ್ನ ಹಿರಿಯ ನ್ಯಾಯವಾದಿ ಐರಿನಾ ವೆನೆಡಿಕ್ಟೋವಾ ತಿಳಿಸಿದ್ದಾರೆ.

15 ಲಕ್ಷ ಜನಸಂಖ್ಯೆ ಹೊಂದಿರುವ ಖಾರ್ಕಿವ್, ರಷ್ಯಾದ ಗಡಿಯಿಂದ ಕೇವಲ 40 ಕಿಲೋಮೀಟರ್ ದೂರದಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.