ಲಾಹೋರ್: ಶುಕ್ರವಾರದ ಪ್ರಾರ್ಥನೆ ಮುಗಿಸಿ ಮಸೀದಿಯಿಂದ ಹೊರಗೆ ಬರುತ್ತಿದ್ದ ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪಕ್ಷದ ನಾಯಕರೊಬ್ಬರನ್ನು ಗುಂಡಿಕ್ಕಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
.ಪಾಕಿಸ್ತಾನ | ಇಮ್ರಾನ್ ಖಾನ್ ಪತ್ನಿಯ ವಿರುದ್ಧ 11 ಪ್ರಕರಣ.
‘ಲಾಹೋರ್ನ ವೆಲನ್ಸಿಯಾ ಟೌನ್ ಮಸೀದಿಯಿಂದ ಪ್ರಾರ್ಥನೆ ಮುಗಿಸಿ ಹೊರಗೆ ಬರುತ್ತಿದ್ದ ಡಾ. ಶಾಹಿದ್ ಸಿದ್ದೀಖ್ ಖಾನ್ ಅವರ ಮೇಲೆ ನಾಲ್ವರು ಆಗಂತುಕರು ಗುಂಡು ಹಾರಿಸಿ, ಎರಡು ಬೈಕ್ಗಳನ್ನೇರಿ ಪರಾರಿಯಾಗಿದ್ದಾರೆ. ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ’ ಎಂದು ಲಾಹೋರ್ ಪೊಲೀಸ್ ವಕ್ತಾರ ತಿಳಿಸಿದ್ದಾರೆ.
.ಇಮ್ರಾನ್ ಖಾನ್ ನಡೆ ಉಗ್ರ ಸಂಘಟನೆಗಳ ಕೃತ್ಯಕ್ಕೆ ಸಮ: ಕೋರ್ಟ್.
ಈ ಘಟನೆಯ ತನಿಖೆಗೆ ವಿಶೇಷ ತಂಡ ರಚಿಸಿ ಲಾಹೋರ್ ಪೊಲೀಸ್ ಮುಖ್ಯಸ್ಥರು ಆದೇಶಿಸಿದ್ದಾರೆ ಎಂದು ವಕ್ತಾರ ತಿಳಿಸಿದ್ದಾರೆ.

ಶಾಹಿದ್ ಸಿದ್ದೀಖ್ ಅವರು ಖಾಸಗಿ ಆಸ್ಪತ್ರೆಯ ಮಾಲೀಕರಾಗಿದ್ದು, ಈ ಹಿಂದೆ ಪಾಕಿಸ್ತಾನ್–ತೆಹ್ರಿಕ್–ಎ–ಇನ್ಸಾಫ್ ಪಕ್ಷದ ಪಂಜಾಬ್ ವಲಯದ ಮಾಹಿತಿ ಕಾರ್ಯದರ್ಶಿಯಾಗಿದ್ದರು.

ಆರೋಪಿಗಳನ್ನು ತಕ್ಷಣವೇ ಬಂಧಿಸಬೇಕು ಎಂದು ಪಂಜಾಬ್ ಐಜಿಪಿ ಡಾ. ಉಸ್ಮಾನ್ ಅನ್ವರ್ ಅವರು ಲಾಹೋರ್ ಪೊಲೀಸರಿಗೆ ನಿರ್ದೇಶಿಸಿದ್ದಾರೆ.
.ಪಾಕಿಸ್ತಾನದ ಪದಚ್ಯುತ ಪ್ರಧಾನಿ ಇಮ್ರಾನ್ ಖಾನ್ ಮನೆಗೆ ನುಗ್ಗಿದ ಪೊಲೀಸರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.